HEALTH TIPS

ಸಮಗ್ರ ಶಿಕ್ಷಣ ಕೇರಳ ಯೋಜನೆ-ಇಂದಿನಿಂದ ಶಿಕ್ಷಕರಿಗೆ ರಜಾ ಕಾಲದ ಸಂಗಮ

            ಕಾಸರಗೋಡು: ಸಮಗ್ರ ಶಿಕ್ಷಣ ಕೇರಳ ಯೋಜನೆಯ ಸ್ಟಾರ್ಸ್ ಯೋಜನೆಯಲ್ಲಿ ಒಳಗೊಂಡಿರುವ 2024-25ನೇ ಸಾಲಿನ 1 ರಿಂದ 10 ನೇ ತರಗತಿಯ ಶಿಕ್ಷಕರಿಗೆ ರಜಾ ಕಾಲದ ಸಂಗಮ  ಮೇ 14 ರಿಂದ 18 ಮತ್ತು 20 ರಿಂದ 24 ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಇದನ್ನು ಎರಡು ಹಂತಗಳಲ್ಲಿ ಮಾಡಲಾಗುವುದು. ಬದಲಾದ ಪಠ್ಯಕ್ರಮದ ಹಿನ್ನೆಲೆಯಲ್ಲಿ ಶಿಕ್ಷಕರ ಈ ಸಭೆಯಹೆಚ್ಚು ಮಹತ್ವ ಪಡೆದುಕೊಂಡಿದೆ.

        ಅಧ್ಯಯನ ವರ್ಷದಲ್ಲಿ 1ನೇ, 3ನೇ, 5ನೇ, 7ನೇ ಮತ್ತು 9ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕ ಬರಲಿದ್ದು, ಈ  ಪಠ್ಯಪುಸ್ತಕವನ್ನು ಆಧರಿಸಿ ಮತ್ತು ಶಾಲೆಗಳಲ್ಲಿ ಶೈಕ್ಷಣಿಕ ಉತ್ಕøಷ್ಟತೆಯನ್ನು ಹೆಚ್ಚಿಸಲು ವಿನೂತನ ಯೋಜನೆಗಳನ್ನು ಒಳಗೊಂಡಂತೆ ಐದು ದಿನಗಳ ತರಬೇತಿಯನ್ನು ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸಮಗ್ರ ಶಿಕ್ಷಾ ಕೇರಳ ತರಬೇತಿ ನಡೆಸಿಕೊಡಲಿದೆ.

             ಜಿಲ್ಲೆಯಲ್ಲಿ ಶಿಕ್ಷಕರ ಸಂಗಮ ಎಂಬ ಎರಡು ಹಂತದಲ್ಲಿ 187 ಬ್ಯಾಚ್‍ಗಳಲ್ಲಿ 7222 ಶಿಕ್ಷಕರಿಗೆ ಸುಮಾರು 300 ಆರ್‍ಪಿಗಳ ನೇತೃತ್ವದಲ್ಲಿ ತರಬೇತಿ ನೀಡಲಾಗುತ್ತಿದೆ. ಸಮಗ್ರ ಶಿಕ್ಷಾ ಕೇರಳ ತರಬೇತಿಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ.

                 ಜಿಲ್ಲೆಯಲ್ಲಿ 187ಬ್ಯಾಚುಗಳಲ್ಲಾಗಿ 7222ಮಂದಿ ಶಿಕ್ಷಕರಿಗೆ  300 ಆರ್‍ಪಿಗಳ ನೇತೃತ್ವದಲ್ಲಿ ಎರಡು ಹಂತಗಳಲ್ಲಾಗಿ ತರಬೇತಿ ನೀಡಲಾಗುತ್ತಿದೆ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ದಿನೇಶ್, ಡಯಟ್ ಪ್ರಾಚಾರ್ಯ ಡಾ.ಕೆ. ರಘುರಾಮಭಟ್ ಸಮಗ್ರ ಶಿಕ್ಷಾ ಕೇರಳ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ವಿ.ಎಸ್.ಬಿಜುರಾಜ್ ಭಾಗವಹಿಸುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries