ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೇಳ ಕುಮಾರಮಂಗಲ ಕೋಡಿಂಗಾರು ಮನೆತನದ ಉಳಿಪ್ಪಾಡಿ ನಿವಾಸಿ, ಯು.ಟಿ ಆಳ್ವ ಎಂದೇ ಪರಿಚಿತರಾಗಿರುವ ಉಳಿಪ್ಪಾಡಿ ತಾರಾನಾಥ ಆಳ್ವ(88)ಶನಿವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಪ್ರಮುಖ ಧಾರ್ಮಿಕ ಮುಂದಾಳು ಆಗಿದ್ದ ಇವರು ಪೆÇಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಕುಕ್ಕಂಕೂಡ್ಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲೂ ಸಕ್ರಿಯರಾಗಿದ್ದರು. ಬೇಳ ಕುಮಾರಮಂಗಲ ಸಮೀಪದ ಕೋಡಿಂ ಗಾರು ಮನೆತನದ ಡಾ.ಕೆ.ಸಿ. ಯು.ಟಿ. ಆಳ್ವ ಆಳ್ವರ ಪುತ್ರನಾದ ಉಳಿಪ್ಪಾಡಿ ತಾರಾನಾಥ ಆಳ್ವರು ಯು.ಟಿ. ಆಳ್ವರೆಂದೇ ಪ್ರಸಿದ್ಧರಾಗಿದ್ದರು. ಇಂಡ್ಯನ್ ಫಾರೆಸ್ಟ್ ಸರ್ವಿಸ್‍ಗಳಿಸಿದ್ದ(ಐಎಫ್.ಎಸ್) ಇವರು ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಶಕುಂತಳಾ ಆಳ್ವ, ಮಕ್ಕಳಾದ ಶಾರದಾ ಮಣಿ, ರಾಣಿ ಸೇಮಿತ, ಶ್ರೀದೇವಿ, ಶಿವಾನಿ, ಕುಮಾರ್ ಚಿಕ್ಕಪ್ಪ ಆಳ್ವ, ಸಹೋದರ- ಸಹೋದರಿಯರಾದ ಗಣೇಶ್ ಆನಂದ ಆಳ್ವ, ಡಾ| ಪ್ರಕಾಶ್ ಚಂದ್ರ ಆಳ್ವ, ಮುಕ್ತಲತ, ವಿಜಯಲಕ್ಷ್ಮಿ, ಸೊಸೆ, ಅಳಿಯಂದಿರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಸೋಮಲತ ಭಂಡಾರಿ ಹಾಗೂ ಸಹೋದರ ಡಾ. ಬಾಲಕೃಷ್ಣ ಆಳ್ವ ಈ ಹಿಂದೆ ನಿಧನರಾಗಿದ್ದಾರೆ.