ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಗಾಳಿಯೊಂದಿಗೆ ಸುರಿದ ಬೇಸಿಗೆ ಮಳೆಗೆ ಅಲ್ಲಲ್ಲಿ ವ್ಯಾಪಕ ನಾಶ ನಷ್ಟಕ್ಕೆ ಕಾರಣವಾಯಿತು. ಭಾನುವಾರ ರಾತ್ರಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು, ಸೋಮವಾರ ಮುಂಜಾನೆ ಮತ್ತೆ ಸಾಮಾನ್ಯ ಮಳೆಯಾಗಿದೆ. ಸುಡು ಬಿಸಿಲಿಂದ ಕಂಗಾಲಾಗಿದ್ದ ಜನತೆಗೆ ಬೇಸಿಗೆ ಮಳೆ ತಂಪೆರೆಯುವಂತಾಯಿತು.
ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಯೋಮಯವಾಯಿತು. ಸರ್ವೀಸ್ ರಸ್ತೆ ಕೆಸರುಮಯವಾಗಿತ್ತು. ಕಾಸರಗೋಡು ಹೊಸ ಬಸ್ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ಮೇಲ್ಚಾವಣಿಯಲ್ಲಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಜಾಹೀರಾತು ಫಲಕ ಬಿರುಸಿನ ಗಾಳಿಗೆ ಧರಾಶಾಯಿಯಾಗಿದ್ದು, ರಸ್ತೆಯಲ್ಲಿ ನಡೆದುಹೋಗುತ್ತಿದ್ದವರು ಕೂದಲೆಳೆಯ ಅಂತರದಿಂದ ಪಾರಾಗಿದ್ದರು. 25ಅಡಿ ಎತ್ತರ, 40ಅಡಿ ಅಗಲದ ಬೃಹತ್ ಗಾತ್ರದ ಕಬ್ಬಿಣದ ರಾಡ್‍ಗಳನ್ನು ಕಾಂಕ್ರೀಟ್ ಪಿಲ್ಲರ್ ಮೂಲಕ ಜಾಹೀರಾತು ಫಲಕವನ್ನು ಮೇಲ್ಚಾವಣಿಯಲ್ಲಿ ಅಳವಡಿಸಲಾಗಿದ್ದು, ಬಿರುಸಿನ ಗಾಳಿಗೆ ಬುಡಸಹಿತ ಕಳಚಿ ಬಿದ್ದಿತ್ತು. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜಾಹೀರಾತು ಫಲಕ ಸ್ಥಳಾಂತರಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಮೋಡದ ವಾತಾವರಣ ಮುಂದುವರಿದಿದ್ದು, ಇನ್ನೂ ಎರಡು ದಿವಸಗಳ ಕಾಲ ಬೇಸಿಗೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸಊಚನೆ ನೀಡಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದ ಶಾಪಿಂಗ್ಕಾಂಪ್ಲೆಕ್ಸ್ ಮೇಲ್ಚಾವಣಿಯಲ್ಲಿ ಅಳವಡಿಸಿದ್ದ ಬೃಹತ್ ಜಾಹೀರಾತು ಫಲಕ ಬಿರುಸಿನ ಗಾಳಿಗೆ ಧರಾಶಾಯಿಯಾಘಿದೆ.