ನಾವು ಮೊಬೈಲ್ ಪೋನ್ ಮತ್ತು ಕಂಪ್ಯೂಟರ್‍ಗಳಂತಹ ಯಾವುದೇ ಡಿಜಿಟಲ್ ಸಾಧನಗಳನ್ನು ಬಳಸಿದಾಗ, ನಾವು ಯಾವಾಗಲೂ ಪಾಸ್‍ವರ್ಡ್ ಅನ್ನು ಮೊದಲು ನಮೂದಿಸಲು ಪ್ರಯತ್ನಿಸುತ್ತೇವೆ.
ನಾವು ನಮ್ಮ ಮನೆ ಬಾಗಿಲಿಗೆ ಪಾಸ್‍ವರ್ಡ್‍ಗಳನ್ನು ಹೊಂದಿರುವ ಸಾಧನಗಳನ್ನು ಸಹ ಇರಿಸುತ್ತೇವೆ. ಇಲ್ಲಿ ನಾವು ಮುಖ್ಯವಾಗಿ ಸುರಕ್ಷತೆಯನ್ನು ಪರಿಗಣಿಸುತ್ತೇವೆ. ಪೋನ್‍ನಲ್ಲಿರುವ ಡೇಟಾವನ್ನು ಸುರಕ್ಷಿತವಾಗಿರಿಸಲು ಮತ್ತು ಮನೆಯನ್ನು ಸುರಕ್ಷಿತವಾಗಿರಿಸಲು ನಾವು ಈ ಪಾಸ್‍ವರ್ಡ್‍ಗಳನ್ನು ಬಳಸುವುದು ಇತ್ತೀಚೆಗೆ ಸಾಮಾನ್ಯ.
ಆದರೆ ಚೆಕ್ ಪಾಯಿಂಟ್ ಸಾಫ್ಟ್‍ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿಯ ಪ್ರಕಾರ, ಭಾರತದಲ್ಲಿ ಹೆಚ್ಚಿನ ಜನರು ದುರ್ಬಲ ಪಾಸ್‍ವರ್ಡ್‍ಗಳನ್ನು ನೀಡುತ್ತಿದ್ದಾರೆ. ಇದು ನಿಮ್ಮ ಸಾಧನವನ್ನು ಹ್ಯಾಕ್ ಮಾಡಲು ಸುಲಭಗೊಳಿಸುತ್ತದೆ. ವರದಿಯ ಪ್ರಕಾರ, ಸೈಬರ್ ಅಪರಾಧಿಗಳು ಇಂತಹ ದುರ್ಬಲ ಪಾಸ್‍ವರ್ಡ್‍ಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ಸಾಮಾನ್ಯವಾಗಿ ನಾವು ಸುಲಭವಾಗಿ ನೆನಪಿಟ್ಟುಕೊಳ್ಳಲು ಪಾಸ್‍ವರ್ಡ್ 1234 ಅನ್ನು ನೀಡುತ್ತೇವೆ. ನೀವು ಈ ಕೆಳಗಿನ ಪಾಸ್‍ವರ್ಡ್‍ಗಳನ್ನು ಬಳಸುತ್ತಿದ್ದರೆ, ತಕ್ಷಣವೇ ಅವುಗಳನ್ನು ಬದಲಾಯಿಸಿದರೆ ಅತ್ಯುತ್ತಮ.
1234,
1111
0000
1212
7777
1004
2000
4444
2222
6969..ಇತ್ಯಾದಿ
ಚೆಕ್ ಪಾಯಿಂಟ್ ಸಾಫ್ಟ್‍ವೇರ್ ಟೆಕ್ನಾಲಜೀಸ್ ಲಿಮಿಟೆಡ್ ವರದಿಯು ಈ ಪಾಸ್‍ವರ್ಡ್‍ಗಳು ತುಂಬಾ ದುರ್ಬಲ ಪಾಸ್‍ವರ್ಡ್‍ಗಳಾಗಿವೆ ಎಂದು ಹೇಳುತ್ತದೆ. ಅನೇಕ ಜನರು ತಮ್ಮ ಜನ್ಮ ವರ್ಷ ಮತ್ತು ಪೋನ್ ಸಂಖ್ಯೆಯನ್ನು ಪಾಸ್ವಡ್ರ್ಗಳಾಗಿ ಹಾಕುತ್ತಾರೆ. ವರದಿಯ ಪ್ರಕಾರ ಹ್ಯಾಕರ್‍ಗಳು ನಿಮ್ಮ ಸಾಧನವನ್ನು ಹ್ಯಾಕ್ ಮಾಡಲು ಇದು ತುಂಬಾ ಸುಲಭವಾಗಿದೆ. ಆದ್ದರಿಂದ ಪ್ರಜ್ಞಾವಂತಿಕೆಯೊಂದಿಗೆ ಪಾಸ್‍ವರ್ಡ್ ಬಳಸಲು ನಾವು ಮುತುವರ್ಜಿ ವಹಿಸುವ ತುರ್ತಿದೆ.