ತಿರುವನಂತಪುರ: ಪಠ್ಯಪುಸ್ತಕ ಮುದ್ರಿಸಿ ಶಾಲೆಗಳಿಗೆ ತಲುಪಿಸಲಾಗಿದ್ದರೂ ಶಿಕ್ಷಕರ ತರಬೇತಿಗೆ ಪುಸ್ತಕ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶದಿಂದ ಮರಳಿದ ನಂತರ ಪುಸ್ತಕ ವಿತರಿಸಲು ನಿರ್ಧರಿಸಲಾಗಿದೆ.
ಈ ವರ್ಷ 1, 3, 5, 7 ಮತ್ತು 9 ನೇ ತರಗತಿಗಳ ಪಠ್ಯಪುಸ್ತಕಗಳÀನ್ನು ನವೀಕರಿಸಲಾಗಿದೆ. ಮುದ್ರಿತ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಯಾವುದೇ ಸಂದರ್ಭದಲ್ಲೂ ಪಠ್ಯಪುಸ್ತಕ ಬಿಡುಗಡೆ ಮಾಡದಂತೆ ಎಇಒ ಹಾಗೂ ಶಾಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನಿನ್ನೆ ಸುತ್ತೋಲೆ ಹೊರಡಿಸಿದ್ದಾರೆ.
ಕಚೇರಿಯಿಂದ ಮಾಹಿತಿ ನೀಡಿದ ನಂತರ ಮಾತ್ರವೇ ಪಠ್ಯಪುಸ್ತಕ ವಿತರಿಸಿದರೆ ಸಾಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ ಪೂರೈಕೆ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಇದೇ ವೇಳೆ ಮುಖ್ಯಮಂತ್ರಿ ವಿದೇಶ ಪ್ರವಾಸದಲ್ಲಿದ್ದ ಕಾರಣ ಪಠ್ಯಪುಸ್ತಕ ಬಿಡುಗಡೆಯಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಮರಳಿದ ನಂತರ ಪುಸ್ತಕ ವಿತರಿಸಿದರೆ ಸಾಕು ಎಂಬುದು ಸರ್ಕಾರದ ಸಲಹೆ ಎಂದು ಮಾಹಿತಿ ನೀಡಿದ್ದಾರೆ.
ಶಿಕ್ಷಕರಿಗೆ ಮೊದಲ ಹಂತದ ತರಬೇತಿ ಇಂದಿಗೆ ಮುಕ್ತಾಯವಾಗಿದೆ. ಆದರೂ ಶಿಕ್ಷಕರ ತರಬೇತಿಯಲ್ಲಿ ಪಠ್ಯಪುಸ್ತಕ ನೀಡಿಲ್ಲ. ಪಠ್ಯಪುಸ್ತಕದ ಸಂಕ್ಷಿಪ್ತ ಆವೃತ್ತಿಯ ಪ್ರತಿಯನ್ನು ಶಿಕ್ಷಕರ ತರಬೇತಿಗಾಗಿ ಬಳಸಲಾಯಿತು. ಆದ್ದರಿಂದ, ಶಿಕ್ಷಕರು ಪಠ್ಯಪುಸ್ತಕದ ಬಗ್ಗೆ ನಿಜವಾದ ವಿಶ್ಲೇಷಣೆ ಮತ್ತು ತರಬೇತಿಯನ್ನು ಪಡೆದಿಲ್ಲ. ಮುಖ್ಯಮಂತ್ರಿ ಆಗಮಿಸಿ ಬಿಡುಗಡೆ ಮಾಡುವವರೆಗೂ ಶಿಕ್ಷಕರ ತರಬೇತಿ ವೇಳೆ ಪಠ್ಯಪುಸ್ತಕ ನೀಡದಿರುವ ಬಗ್ಗೆ ಶಿಕ್ಷಕರಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.