ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2024ನೇ ಸಾಲಿನ 'ಗೌರವ ಪ್ರಶಸ್ತಿ'ಗೆ ಹಾಸನದ ಜಾನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇಗೌಡ ಮತ್ತು ಮೈಸೂರಿನ ಚಿಂತಕಿ, ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಭಾಜನರಾಗಿದ್ದಾರೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2024ನೇ ಸಾಲಿನ 'ಗೌರವ ಪ್ರಶಸ್ತಿ'ಗೆ ಹಾಸನದ ಜಾನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇಗೌಡ ಮತ್ತು ಮೈಸೂರಿನ ಚಿಂತಕಿ, ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಭಾಜನರಾಗಿದ್ದಾರೆ.
ಡಾ. ಮನು ಬಳಿಗಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧ್ಯಕ್ಷರಿಗೆ ನೀಡುವ ಗೌರವ ಧನವನ್ನು ಸ್ವೀಕರಿಸದೆ, ಆ ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ದತ್ತಿ ಇರಿಸಿದ್ದು, ಕನ್ನಡ ನಾಡು-ನುಡಿಗೆ ಮಹತ್ವದ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ರಾಮಚಂದ್ರೇಗೌಡರು, ಕೇರಳದಲ್ಲಿ ಜನಪದ ಅಧ್ಯಯನ ಮಾಡಿ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿರ್ದೇಶಕರಾಗಿ ನಿವತ್ತರಾಗಿದ್ದಾರೆ. ಡಾ. ಸುಮಿತ್ರಾಬಾಯಿ ಮೈಸೂರು ವಿವಿಯಿಂದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಜೈನ ಶಾಸ ಮತ್ತು ಪ್ರಾಕತ ವಿಭಾಗದಲ್ಲಿ ಪಿಎಚ್.ಡಿ ಪದವಿ ಪಡೆದು, ಭರತನಾಟ್ಯ ಶಾಸವನ್ನು ಮಹಿಳಾ ನೆಲೆಯಿಂದ ನೋಡಿದ ವಿಶಿಷ್ಟ ಅಧ್ಯಯನವನ್ನು ನಡೆಸಿದ್ದಾರೆ ಎಂದು ಪರಿಷತ್ತು ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.