ಮಂಜೇಶ್ವರ: ವರ್ಕಾಡಿ ಬಾಕ್ರಬೈಲ್ ನಿವಾಸಿ ಮಹಾಬಲ ಶೆಟ್ಟಿ ಎಂಬವರ ಮನೆ ಸನಿಹದ ಹಟ್ಟಿಗೆ ಬೆಂಕಿ ತಗುಲಿ ಸಂಪೂರ್ಣ ಹಾನಿ ಸಂಭವಿಸಿದೆ. ಹಟ್ಟಿಯೊಳಗೆ ಬಿಗಿದಿದ್ದ ಹಸುಗಳು ಏಕಾಏಕಿ ಕೂಗುತತಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮನೆಯವರು ಹೊರಗೆ ಬಂದುನೋಡಿದಾಗ ಹಟ್ಟಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿತ್ತು. ತಕ್ಷಣ ಹಟ್ಟಿಯೊಳಗೆ ಬಿಗಿಯಲಾಗಿದ್ದ ಮೂರು ದನಗಳನ್ನು ಹೊರಕ್ಕೆ ಸ್ಥಳಾಂತರಿಸಿ ರಕ್ಷಿಸಲಾಗಿದೆ.
ಹಟ್ಟಿಯ ಮೇಲ್ಚಾವಣಿಯಲ್ಲಿ ಸಂಗ್ರಹಿಸಿಡಲಾಗಿದ್ದ ಬೈಹುಲ್ಲು, ತೆಂಗಿನಕಾಯಿ ಸಂಪೂರ್ಣ ಉರಿದು ನಾಶಗೊಂಡಿದ್ದು, ಎರಡುವರೆ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿ ಶಮನಗೊಳಿಸಿದರೂ, ಹಟ್ಟಿ ಸಂಪೂರ್ಣ ಉರಿದು ನಾಶಗೊಂಡಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿರಬೇಕೆಂದು ಸಮಶಯಿಸಲಾಗಿದೆ.