HEALTH TIPS

ಡಯಟ್‌: ಅಂತರ್ಜಾಲದ ಪುಕ್ಕಟೆ ಸಲಹೆಗಳ ಪ್ರಯೋಗ ಬೇಡ

 ಯಟ್‌ ಎಂಬುದು ಇಂದಿನ ಜೀವನಶೈಲಿಯ ಭಾಗವಾಗಿದೆ. ಏನು ತಿನ್ನಬೇಕು? ಎಷ್ಟು ತಿನ್ನಬೇಕು? ಎಂಬುದರ ಕುರಿತು ತರಹೇವಾರಿ ಪುಕ್ಕಟೆ ಸಲಹೆಗಳು ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ತಪ್ಪು ಗ್ರಹಿಕೆ ಮತ್ತು ಸಲಹೆಗಳಿಂದ ತಪ್ಪಾದ ಆಹಾರಕ್ರಮವನ್ನು ಅನುಸರಿಸಿ ತೊಂದರೆಗೆ ಸಿಲುಕುವವರು ಇದ್ದಾರೆ.

ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಬರುತ್ತದೆ. ನಿಪುಣ ತಜ್ಞರ ನೆರವಿನಿಂದ ಸರಿಯಾದ ಆಹಾರಪದ್ಧತಿಯನ್ನು ಅಳವಡಿಸಿಕೊಳ್ಳಿ.

ಬಹುತೇಕರ ಡಯಟ್‌ ಕೆಲ ದಿನ ಅಥವಾ ತಿಂಗಳಿಗೆ ಸೀಮಿತಗೊಂಡಿರುತ್ತದೆ. ತೂಕ ಇಳಿಕೆ, ದೈಹಿಕ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಡಯಟ್‌ ಮಾಡುವವರೇ ಹೆಚ್ಚಿದ್ದಾರೆ. ಆದರೆ 'ನೋ ಡಯಟ್‌' ದಿನವೂ ದೈಹಿಕ ಕ್ಷಮತೆಯನ್ನು ಕಾಪಾಡುವುದಲ್ಲದೇ ಕೆಟ್ಟ ಡಯಟ್‌ ಪದ್ಧತಿಯನ್ನು ನಿರಾಕರಿಸುವ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ.

ಅಸಂಬದ್ಧ ಡಯಟ್‌ ಅನುಸರಿಸಿದರೆ ಆಸ್ಪತ್ರೆ ವಾಸ ಗ್ಯಾರಂಟಿ: ಹಲವು ಕಾರಣಗಳಿಗಾಗಿ ಆರೋಗ್ಯಕರವಲ್ಲದ ಡಯಟ್‌ ಮಾಡಿ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಅಗತ್ಯ ಪೋಷಕಾಂಶಗಳನ್ನ ಸೇವಿಸದೆ, ಕ್ಯಾಲೋರಿಗಳುಳ್ಳ ಆಹಾರದಿಂದ ದೂರ ಉಳಿಯುವ ಮೂಲಕ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದರಿಂದ ಬಹುಅಂಗಾಂಗ ವೈಫಲ್ಯ ಉಂಟಾಗಬಹುದು.

ಎಲೆಕ್ಟ್ರೋಲೈಟ್‌ ಅಸಮತೋಲನ, ಹೃದಯಾಘಾತ ಹಾಗೂ ಮೂತ್ರಪಿಂಡದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಅಗತ್ಯ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ, ನಿರ್ಜಲೀಕರಣ, ದೌರ್ಬಲ್ಯ, ವಾಕರಿಕೆ, ಮಲಬದ್ಧತೆ ಜೊತೆಗೆ ವಿಟಮಿನ್‌ಗಳು ಹಾಗೂ ಖನಿಜಗಳ ಅಸರ್ಮಕ ಸೇವನೆಯಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಉತ್ತಮ ಆಹಾರ ಸೇವನೆಯನ್ನು ತಪ್ಪಿಸುವುದು ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವುದಾಗಿದೆ.

ತಪ್ಪಾದ ಕ್ರಮಗಳು

ಅತಿಯಾದ ಡಯಟ್‌ನಿಂದಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾ ನರ್ವೋಸಾದಂಥ ಸಮಸ್ಯೆ ಕಾಡಬಹುದು. ಇದು ಗಂಭೀರವಾದ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉಂಟುಮಾಡಬಹುದು. ಆಗ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಸಮರ್ಪಕ ಪೋಷಣೆಯೊಂದಿಗೆ ಅತಿ ವ್ಯಾಯಾಮದಿಂದ ಗಾಯಗಳು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಕೂಡ ಉಂಟಾಗುತ್ತದೆ. ಆಗ ವೈದ್ಯರನ್ನ ಕಾಣಬೇಕಾಗುತ್ತದೆ.

ತಪ್ಪಾದ ಡಯಟ್‌ ಅನುಸರಿಸುವುದು ಹಾಗೂ ಕಡಿಮೆ ಕ್ಯಾಲೋರಿ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಅತೃಪ್ತಿ, ಸ್ವಗೌರವ ಕಡಿಮೆ ಆಗುವುದು, ತಿನ್ನುವ ಅಸ್ವಸ್ಥತೆ, ಮಾಂಸಖಂಡಗಳು ಬಲಹೀನವಾಗುವುದು, ಮೂಳೆಗಳು ದುರ್ಬಲಗೊಳ್ಳುವುದು, ಹೃದ್ರೋಗ ಹಾಗೂ ಹಾರ್ಮೋನ್‌ಗಳ ಅಸಮತೋಲನದಂತಹ ಹಾನಿಕಾರಕ ಅಡ್ಡಪರಿಣಾಮಗಳು ಎದುರಾಗುತ್ತವೆ. ಇವುಗಳನ್ನು ತಡೆಗಟ್ಟಲು ಕೆಟೋಜೆನಿಕ್‌ ಆಹಾರವನ್ನು ಸೇವಿಸುವುದು ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹೆಪಾಟಿಕ್ ಸ್ಟೀಟೋಸಿಸ್, ಮೂತ್ರಪಿಂಡದ ಕಲ್ಲುಗಳು, ಹೈಪೋಪ್ರೋಟೀನೆಮಿಯಾ ಮತ್ತು ವಿಟಮಿನ್ ಕೊರತೆಯಂತಹ ದೀರ್ಘಾಕಾಲಿಕ ಪರಿಣಾಮಗಳು ಎದುರಾಗುತ್ತವೆ. ಆಗ ಕೆಟೋಜೆನಿಕ್‌ ಆಹಾರ ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries