ಗುರುವಾಯೂರು: ಗುರುವಾಯೂರು ದೇವಸ್ವಂ ಸಂಪೂರ್ಣ ಸೌರಶಕ್ತಿಗೆ ಬದಲಾಗುತ್ತಿದೆ. ಗುರುವಾಯೂರು ದೇವಸ್ಥಾನ ಸೇರಿದಂತೆ ದೇವಸ್ವಂನ ಎಲ್ಲಾ ಸಂಸ್ಥೆಗಳು ಈಗ ಸ್ವಂತ ವಿದ್ಯುತ್ ಹೊಂದಲಿವೆ.
275 ಕಿಲೋವ್ಯಾಟ್ ಸಾಮಥ್ರ್ಯದ ಸೌರ ಫಲಕಗಳನ್ನು ಅಳವಡಿಸಲಾಗಿದೆ. ನಿರ್ಮಾಣಕ್ಕೆ 1 ಕೋಟಿ ರೂ.ವೆಚ್ಚವಾಗಿದೆ. ಇವುಗಳನ್ನು ದೇವಸ್ವಂನ ಪಾಂಚಜನ್ಯಂ ಅತಿಥಿ ಗೃಹ ಕಟ್ಟಡದ ಮೇಲೆ ಇರಿಸಲಾಗಿದೆ. ಗುರುವಾಯೂರು ದೇವಸ್ವಂ ಎರಡು ತಿಂಗಳೊಳಗೆ ಸ್ವಂತ ವಿದ್ಯುತ್ ಉತ್ಪಾದಿಸಿ ಸೌರಶಕ್ತಿ ಕ್ರಾಂತಿ ಸೃಷ್ಟಿಸಲಿದೆ ಎಂದು ದೇವಸ್ವಂ ಚೇರ್ಮನ್ ಡಾ. ವಿ.ಕೆ. ವಿಜಯನ್ ಹೇಳಿರುವರು.
ಪ್ರಸ್ತುತ ಗುರುವಾಯೂರು ದೇವಸ್ವಂಗೆ ದಿನಕ್ಕೆ 90 ಕಿಲೋವ್ಯಾಟ್ ವಿದ್ಯುತ್ ಅಗತ್ಯವಿದೆ. ಅಷ್ಟು ವಿದ್ಯುತ್ ಬಳಕೆಯ ಬಳಿಕ ಉಳಿದ ವಿದ್ಯುತ್ ನ್ನು ಕೆ.ಎಸ್.ಇ.ಬಿ ಗೆ ನೀಡಲಾಗುವುದು. ದೇವಸ್ವಂ ಸಂಸ್ಥೆಗಳಿಗೆ ದೇವಸ್ವಣನÀ ಸ್ವಂತ ಟ್ರಾನ್ಸ್‍ಫಾರ್ಮರ್ ಮೂಲಕ ವೋಲ್ಟೇಜ್ ಕಡಮೆ ಮಾಡುವ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.
ದೇವಸ್ವಂನ ಶಕ್ತಿ ಕೇಂದ್ರವು 500 ಕಿಲೋವ್ಯಾಟ್ ಸಾಮಥ್ರ್ಯ ಹೊಂದಿದೆ. ಎರಡು ಜನರೇಟರ್ ವ್ಯವಸ್ಥೆ ಇರುವುದರಿಂದ ದೇವಸ್ಥಾನ ಅಥವಾ ಇತರೆ ಸಂಸ್ಥೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ. ಉತ್ಪಾದಿಸಿದ ಸೌರಶಕ್ತಿಯನ್ನು ಪವರ್‍ಹೌಸ್‍ಗೆ ಜೋಡಿಸಿ ದೇವಸ್ವಂ ಸಂಸ್ಥೆಗಳಿಗೆ ವಿತರಿಸಲಾಗುವುದು. ದಿನಕ್ಕೆ 90-100 ವ್ಯಾಟ್ ವಿದ್ಯುತ್ ಬಳಸಿದ ನಂತರ ಉಳಿದ ವಿದ್ಯುತ್ ಅನ್ನು ಕೆಎಸ್‍ಇಬಿಯ ಗ್ರಿಡ್‍ಗೆ ಸರಬರಾಜು ಮಾಡಲಾಗುತ್ತದೆ. ಮೊತ್ತವನ್ನು ಕೆಎಸ್‍ಇಬಿ ದೇವಸ್ವಂ ಗೆ ನೀಡಲಾಗುವುದು. ದೇವಸ್ವಂ ಎಲೆಕ್ಟ್ರಿಕಲ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಿ. ಜಯರಾಜ್ ಈ ಬಗ್ಗೆ ಮಾಹಿತಿ ನೀಡಿರುವರು.
ಸೌರ ಫಲಕಗಳನ್ನು ಗರಿಷ್ಠ ಸೂರ್ಯನ ಬೆಳಕನ್ನು ಪಡೆಯುವಲ್ಲಿ ಇರಿಸಲಾಗುತ್ತದೆ. 90ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಗುರುವಾಯೂರು ದೇವಸ್ಥಾನದ ಹೊರತಾಗಿ ನೂರು ಮೀಟರ್ ವ್ಯಾಪ್ತಿಯಲ್ಲಿರುವ ದೇವಸ್ವಂ ಕಚೇರಿ, ಶ್ರೀವತ್ಸ-ಪಾಂಚಜನ್ಯಂ-ಕೌಸ್ತುಭಂ ಅತಿಥಿ ಗೃಹಗಳು, ದೇವಸ್ವಂ ವೈದ್ಯಕೀಯ ಕೇಂದ್ರ, ಗ್ರಂಥಾಲಯ ಹಾಗೂ ಇತರೆ ದೇವಸ್ವಂ ಸಂಸ್ಥೆಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಪೂರೈಸಲಿವೆ.
ಬಿಸಿಲಿನ ತಾಪ ಹೆಚ್ಚುವುದರೊಂದಿಗೆ ವಿದ್ಯುತ್ ಬಳಕೆಯಲ್ಲಿಯೂ ಹೆಚ್ಚಳವಾಗಿದೆ. ದೇವಸ್ಥಾನದ ಕಾರಿಡಾರ್ ನಲ್ಲಿ ಒಟ್ಟು 100 ಫ್ಯಾನ್ ಗಳಿವೆ. ದೇವಸ್ಥಾನದ ಕೆರೆಯ ನೀರು ಶುದ್ಧೀಕರಣ ಘಟಕ ಮತ್ತು ದೇವಸ್ಥಾನದ ಪ್ರಸಾದ ನಿರ್ಮಾಣ, ಭೋಜನ ಘಟಕದ ಹೊಗೆಯನ್ನು ಹೊರಹಾಕುವ ಮೋಟರ್‍ಗೆ ವಿದ್ಯುತ್ ಬಳಕೆ ಹೆಚ್ಚು. ವಿದ್ಯುತ್ ಬಳಕೆಯನ್ನು ಕಡಮೆ ಮಾಡಲು ಎಲ್ಲಾ ಹಳೆಯ ಹ್ಯಾಲೊಜೆನ್ ಮತ್ತು ಸೋಡಿಯಂ ದೀಪಗಳನ್ನು ಎಲ್ಇಡಿಗಳೊಂದಿಗೆ ಬದಲಾಯಿಸಲಾಗಿದೆ.