ಕಾಸರಗೋಡು: ಕೇರಳ ಸರ್ಕಾರದ ಸಾಂಸ್ಕøತಿಕ ಇಲಾಖೆಯ ವಜ್ರಮಹೋತ್ಸವ ಫೆಲೋಶಿಪ್ ಯೋಜನೆಯನ್ವಯ ತರಬೇತಿ ಪಡೆದ ನೀಲೇಶ್ವರ ನಗರಸಭೆ ವ್ಯಾಪ್ತಿಯ ಕಾರ್ಯಂಗೋಡ್ ರೆಡ್‍ಸ್ಟಾರ್ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ ವನಿತಾವೇದಿ ಪೂರಕ್ಕಳಿ ಕಲಾವಿದರ ರಂಗಪ್ರವೇಶ ಕಾರ್ಯಕ್ರಮ ಕಾರ್ಯಂಗೋಡ್ ಸೇತುವೆ ಬಳಿ ನೆರವೇರಿತು. ಕೇರಳ ಪೂರಕ್ಕಳಿ ಅಕಾಡೆಮಿ ಅಧ್ಯಕ್ಷ ಮಾಜಿ ಶಾಸಕ ಕೆ. ಕುಞÂರಾಮನ್ ಉದ್ಘಾಟಿಸಿದರು
ವಜ್ರ ಮಹೋತ್ಸವ ಫೆಲೋಶಿಪ್ ಯೋಜನೆ ಕಾಸರಗೋಡು ಜಿಲ್ಲಾ ಸಂಯೋಜಕ ಪ್ರವೀಣ್ ನಾರಾಯಣನ್ ಅವರು ಫೆಲೋಶಿಪ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕ್ಲಬ್ ಅಧ್ಯಕ್ಷ ಸಿ. ಎಚ್.ಸುಜಿತ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪ್ರತಿನಿಧಿಗಳು, ಪೂರಕ್ಕಳಿ ಕಲಾ ಶಿಕ್ಷಕ ವೈಶಾಖ ಕೆ, ಸಹ ಕಲಾವಿದರಾದ ಸುಬಿನ್ ನೀಲಂಕರ, ಸಬಿನ್ ಪಿ ಮೊದಲಾದವರು ಭಾಗವಹಿಸಿದ್ದರು. ಒಂದು ವರ್ಷದ ಕಾಲಾವಧಿಯ ಯೋಜನೆಯನ್ವಯ ತರಬೇತಿ ಪಡೆಯುತ್ತಿರುವ ಕ್ಲಬ್ ವನಿತಾ ವೇದಿಕೆಯ ಮಕ್ಕಳು, ಹಿರಿಯರು ಸೇರಿದಂತೆ 37 ಮಹಿಳೆಯರು ಪುರಕಳಿ ಕಲಾವಿದರ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಲಬ್ ಕಾರ್ಯದರ್ಶಿ ವಿ. ವಿ.ರಜಿತ್‍ಕುಮಾರ್ ಸ್ವಾಗತಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಸಿಂಧು ಮಹೇಂದ್ರನ್ ವಂದಿಸಿದರು.