ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರಿಗೆ ಸವಲತ್ತು ಒದಗಿಸಿಕೊಡುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಮುಷ್ಕರವನ್ನು ಕೈಗೆತ್ತಿಕೊಳ್ಳಲು ಜಿಲ್ಲೆಯ ಐವರು ಶಾಸಕರು ಹಾಗೂ ಸಂಸದರು ಮುಂದಾಗಬೇಕು ಎಂದು ಡಾ.ಖಾದರ್ ಮಾಙËಡ್ ತಿಳಿಸಿದ್ದಾರೆ.
ಅವರು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಎದುರು ಎಂಡೋಸಲ್ಫಾನ್ ದುಚ್ಪರಿಣಾಮಪೀಡಿತರ ತಾಯಂದಿರು ದೀರ್ಘ ಕಾಲದಿಂದ ನಡೆಸುತ್ತಿರುವ ನಿರಾಹಾರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ನಿರಾಹಾರ ಸತ್ಯಾಗ್ರಹ ಆರಂಭಗೊಂಡು ಮೂರು ತಿಂಗಳು ಕಳೆದರೂ ಎಡಪಂಥೀಯ ಸರ್ಕಾರ ಚರ್ಚೆಗೂ ಸಿದ್ಧರಾಗದೆ, ಸಂತ್ರಸ್ತರ ತಾಯಂದಿರನ್ನು ನಿರಮತರ ಹಸಿವಿನೆಡೆಗೆ ತಳ್ಳುತ್ತಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ತಿಳಿಸಿದರು.
ಎಂಡೋಸಲ್ಫಾನ್ ಸಮಸ್ಯೆ ಕುರಿತು ಜನಸಾಮಾನ್ಯರು ಮಧ್ಯ ಪ್ರವೇಶಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಾಮಾಜಿಕ ಹೋರಾಟಗಾರ ಡಾ.ಅಜಯಕುಮಾರ್ ಕೋಟೋತ್ ಮನವಿ ಮಾಡಿದರು. ಡಾ.ಅಂಬಿಕಾಸುತನ್ ಮಾಙËಡ್ ನಿರಾಹಾರ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿ, ಚರ್ಚೆ ನಡೆಸುವ ಮೂಲಕ ಧರಣಿ ಅಂತ್ಯಗೊಳಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಮನವಿ ಮಡಿದರು. ಎಂ.ಕೆ. ಅಜಿತಾ ಅಧ್ಯಕ್ಷತೆ ವಹಿಸಿದ್ದರು. ವಕೀಲ ಟಿ. ವಿ. ರಾಜೇಂದ್ರನ್, ಫರೀನಾ ಕೊತ್ತಾಪುರ ಬೆಂಬಲ ಸೂಚಿಸಿ ನಿರಹಾರ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ಡಾ. ಟಿ. ಎಂ. ಸುರೇಂದ್ರನಾಥ್, ಮೋಹನನ್ ಕುಶಾಲ್ ನಗರ, ವಿ.ಕಮ್ಮಾರನ್, ಉಮೇಶನ್ ತೈಕ್ಕಡಪ್ಪುರಂ, ಪಿ. ಮುರಳೀಧರನ್, ಎಚ್ ಸೂರ್ಯಭಟ್, ಮಾಧವನ್ ಕರಿವೆಲ್ಲೂರು, ಇ. ತಂಬಾನ್ ಉಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು. ಪಿ. ಶೈನಿ ವಂದಿಸಿದರು.