ಕಾಸರಗೋಡು: ನಗರದ ಕೋಟೆಕಣಿ ಶ್ರೀ ರಾಮನಾಥೇಶ್ವರ ದೇವಸ್ಥಾನ ವಠಾರದ ಶ್ರೀನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸು, ಗುಳಿಗ ಸನ್ನಿಧಿಯಲ್ಲಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬುಧವಾರ ನಡೆಯಿತು.
ಬೆಳಗ್ಗೆ ಗಣಪತಿ ಹೋಮ, ಶ್ರೀನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸು, ಗುಳಿಗ ಸಾನ್ನಿಧ್ಯಗಳ ಪುನ:ಪ್ರತಿಷ್ಠಾಪನೆ, ಪೀಠಕಲಶಾಭಿಷೇಕ, ತಂಬಿಲ ಸೇವೆ ನಡೆಯಿತು. ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. 2ರಂದು ಸಂಜೆ 6ಕ್ಕೆ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಭಂಡಾರದ ಆಗಮನವಾಗಿ 7ಕ್ಕೆ ತೊಡಙಳ್, ಭಜನೆ ನಡೆಯುವುದು. 3ರಂದು ಬೆಳಗ್ಗೆ 9ಕ್ಕೆ ಶ್ರೀ ರಕ್ತೇಶ್ವರೀ ಅಮ್ಮನ ಕೋಲ, ಸಂಜೆ 4ಕ್ಕೆ ಭಂಡಾರದ ನಿರ್ಗಮನ, 4.30ಕ್ಕೆ ಗುಳಿಗ ದೈವದ ಕೋಲ ನಡೆಯುವುದು.