ನವದೆಹಲಿ: ಕಾನೂನಿನ ಜೊತೆ ಸಂಘರ್ಷಕ್ಕೆ ಗುರಿಯಾಗಿರುವ ಮಗುವನ್ನು ಬಾಲಕ ಎಂದು ಪರಿಗಣಿಸಬೇಕೋ, ವಯಸ್ಕ ಎಂದು ಪರಿಗಣಿಸಬೇಕೋ ಎಂಬ ಬಗ್ಗೆ ಪ್ರಾಥಮಿಕ ಪರಿಶೀಲನೆ ನಡೆಸಲು ನೀಡಿರುವ ಮೂರು ತಿಂಗಳ ಅವಧಿಯು 'ಕಡ್ಡಾಯ'ವೇನೂ ಅಲ್ಲ, ಅದು 'ನಿರ್ದೇಶನದ' ಸ್ವರೂಪದಲ್ಲಷ್ಟೇ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಲಿಖಿತ ಕಾರಣ ದಾಖಲಿಸಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಥವಾ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಈ ಅವಧಿಯನ್ನು ವಿಸ್ತರಿಸಲು ಅವಕಾಶ ಇದೆ ಎಂದು ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ರಾಜೇಶ್ ಬಿಂದಲ್ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
ನ್ಯಾಯಾಲಯ, ನ್ಯಾಯಮಂಡಳಿ, ಮಂಡಳಿ ಮತ್ತು ಅರೆನ್ಯಾಯಿಕ ಪ್ರಾಧಿಕಾರಗಳು ಹೊರಡಿಸುವ ಆದೇಶದಲ್ಲಿ, ಅದಕ್ಕೆ ಸಹಿ ಮಾಡುವ ಅಧ್ಯಕ್ಷರ ಅಥವಾ ಸದಸ್ಯರ ಹೆಸರನ್ನು ಉಲ್ಲೇಖಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಗುರುತಿನ ಸಂಖ್ಯೆ ನೀಡಿದ್ದಲ್ಲಿ, ಅದನ್ನು ಕೂಡ ಉಲ್ಲೇಖಿಸಬಹುದು ಎಂದು ಹೇಳಿದೆ.