ಕಾಸರಗೋಡು: ನಗರದ ಕೋಟೆಕಣಿ ಶ್ರೀ ರಾಮನಾಥೇಶ್ವರ ದೇವಸ್ಥಾನ ವಠಾರದ ಶ್ರೀನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸು, ಗುಳಿಗ ಸನ್ನಿಧಿಯಲ್ಲಿ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರನ್ನು ಪೂರ್ಣಕುಂಭದೊಂದಿಗೆ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ರಾಕ್ಷೋಘ್ನ ಹೋಮ, ವಾಸ್ತುಹೋಮ, ನೂತನ ಶಿಲಾಪೀಠಗಳ ಜಲಾಧಿವಾಸ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮ ಜರುಗಿತು.
ಮೇ 1ರಂದು ಬೆಳಗ್ಗೆ ಗಣಪತಿ ಹೋಮ, ಶ್ರೀನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸು, ಗುಳಿಗ ಸಾನ್ನಿಧ್ಯಗಳ ಪುನ:ಪ್ರತಿಷ್ಠಾಪನೆ, ಪೀಠಕಲಶಾಭಿಷೇಕ, ತಂಬಿಲ ಸಏವೆ ನಡೆಯುವುದು.2ರಂದು ಸಂಜೆ 6ಕ್ಕೆ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಭಂಡಾರದ ಆಗಮನ, 7ಕ್ಕೆ ತೊಡಙಳ್, ಭಜನೆ ನಡೆಯುವುದು.
3ರಂದು ಬೆಳಗ್ಗೆ 9ಕ್ಕೆ ಶ್ರೀ ರಕ್ತೇಶ್ವರೀ ಅಮ್ಮನ ಕೋಲ, ಸಂಜೆ 4ಕ್ಕೆ ಭಂಡಾರದ ನಿರ್ಗಮನ, 4.30ಕ್ಕೆ ಗುಳಿಗ ದೈವದ ಕೋಲ ನಡೆಯುವುದು.