ತಿರುವನಂತಪುರ: ರಾಜ್ಯದ ಕರಾವಳಿ ಪೋಲೀಸ್ ಠಾಣೆಗಳ ಅಧಿಕಾರಿಗಳಿಗೆ ಬಂದೂಕು ಮತ್ತು ಗ್ರೆನೇಡ್‍ಗಳೊಂದಿಗೆ ಕಡ್ಡಾಯವಾಗಿ ತರಬೇತಿ ನೀಡಲಾಗುತ್ತಿದೆ.
ಪೂವಾರದಿಂದ ಕಾಸರಗೋಡುವರೆಗಿನ 18 ಕರಾವಳಿ ಪೋಲೀಸ್ ಠಾಣೆಗಳ ಸಿ.ಪಿ.ಓ. ಎಸ್.ಎಚ್.ಒ ರಿಂದ ಜೂನ್ ಎರಡನೇ ವಾರದೊಳಗೆ 580 ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು.
ಪ್ರಸ್ತುತ, ಕರಾವಳಿ ಪೋಲೀಸರ ನಿಯಂತ್ರಣ ವಲಯವು ಕರಾವಳಿಯಿಂದ 12 ನಾಟಿಕಲ್ ಮೈಲುಗಳವರೆಗೆ ಇದೆ. ಪ್ರಸ್ತುತ, ಸಮುದ್ರದಲ್ಲಿ ಮೀನುಗಾರರ ನಡುವೆ ಹಿಂಸಾಚಾರವನ್ನು ನಿಯಂತ್ರಿಸುವುದು, ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಮತ್ತು ಅಕ್ರಮ ಮೀನುಗಾರಿಕೆ ದೋಣಿಗಳನ್ನು ಸೆರೆಹಿಡಿಯುವುದು ಕರಾವಳಿ ಪೋಲೀಸರ ಜವಾಬ್ದಾರಿಯಾಗಿದೆ.
ಆದರೆ ಇದಕ್ಕೆ ಹೆಚ್ಚುವರಿಯಾಗಿ, ಕರಾವಳಿ ಪ್ರದೇಶಗಳಲ್ಲಿ ಅನಿಯಂತ್ರಿತ ಹಿಂಸಾಚಾರವನ್ನು ಎದುರಿಸಲು ಸ್ಥಳೀಯ ಪೋಲೀಸರೊಂದಿಗೆ ಕರಾವಳಿ ಪೋಲೀಸರ ಸೇವೆಯ ಅಗತ್ಯವಿರುತ್ತದೆ, ಅಂತಹ ಸಂದರ್ಭಗಳಲ್ಲಿ, ಸ್ಥಳೀಯ ಪೋಲೀಸರೊಂದಿಗೆ ಗನ್ ಮತ್ತು ಗ್ರೆನೇಡ್ಗಳನ್ನು ಬಳಸಬೇಕಾಗುತ್ತದೆ. ಕೋಸ್ಟ್ ಗಾರ್ಡ್ ನಲ್ಲಿ ಕೆಲಕಾಲ ಇದ್ದವರಿಗೆ ಇವುಗಳನ್ನು ಬಳಸುವ ಅನುಭವ ಕಡಮೆ ಇರುತ್ತದೆ.
ಇದಾದ ಬಳಿಕ ಕರಾವಳಿ ಪೋಲೀಸ್ ಸಹಾಯಕ ಮಹಾನಿರೀಕ್ಷಕ ಜಿ.ಪೂಂಕುಜಲಿ ಪ್ರತಿಕ್ರಿಯಿಸಿ, ರಾಜ್ಯದ ಕರಾವಳಿ ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಗನ್, ಗ್ರೆನೇಡ್ ಬಳಸಿ ಕಡ್ಡಾಯವಾಗಿ ತರಬೇತಿ ನೀಡಲಾಗುತ್ತಿದೆ. ವಿಶೇಷ ಮಾದಕವಸ್ತು ಕಳ್ಳಸಾಗಣೆ ತಂಡ ಸಮುದ್ರದ ಮೇಲೆ ನಿಗಾ ಇಡಲಿದೆ. ಮೀನುಗಾರಿಕಾ ದೋಣಿಗಳು ಮತ್ತು ಡಿಂಗಿಗಳನ್ನು ಬಳಸಿ ರಾಜ್ಯದ ಸಮುದ್ರ ಗಡಿಯಲ್ಲಿ ಮತ್ತು ಅಂತರರಾಷ್ಟ್ರೀಯ ಗಡಿಯಿಂದ ಹಿಂತಿರುಗಿ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಕರಾವಳಿ ಮುಖ್ಯಸ್ಥರಿಗೆ ಮಾಹಿತಿ ಹಸ್ತಾಂತರಿಸಿವೆ. ಈ ಹಿನ್ನೆಲೆಯಲ್ಲಿ ತರಬೇತಿ ಅಗತ್ಯ ಎಮದವರು ತಿಳಿಸಿದರು.
ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಕರಾವಳಿ ಪೆÇಲೀಸರು ಇತರ ಮಿಲಿಟರಿ ಏಜೆನ್ಸಿಗಳೊಂದಿಗೆ ಸಹಭಾಗಿಯಾಗಬೇಕಾಗುತ್ತದೆ.
ದೂರದ ಪ್ರದೇಶದಲ್ಲಿ ಸಂಚರಿಸುವ ಈ ರೀತಿಯ ದೋಣಿಗಳು ಮತ್ತು ಇತರ ಹಡಗುಗಳನ್ನು ದುರ್ಬೀನು ಬಳಸಿ ಕಟ್ಟುನಿಟ್ಟಾಗಿ ಗಮನಿಸುವಂತೆ ಕರಾವಳಿ ಮುಖ್ಯ ಅಧಿಕಾರಿ ಎಲ್ಲಾ ಪೋಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ಗಸ್ತು ದೋಣಿಗಳನ್ನು ಬಳಸಿ ವರದಿ ನೀಡುವಂತೆ ಸೂಚಿಸಲಾಗಿದೆ.