ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಆದಿವಾಸಿ ವಲಯದ ಕೊರಗ ಜನಾಂಗದ ಬಾಲಸಭಾ ಮಕ್ಕಳಿಗಾಗಿ ರಾಣಿಪುರ ವ್ಯೂ ವ್ಯಾಲಿಯಲ್ಲಿ ಮೂರು ದಿನಗಳ ಸಹವಾಸ ಶಿಬಿರ ನಡೆಯಿತು. 'ಕನಸಿನ ಜಾಗ'ಎಂಬ ಹೆಸರಿನಲ್ಲಿ ಸಮಾಜದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಧರಿಸಿದ ಕಥೆಗಳನ್ನು ಮಕ್ಕಳೇ ಪ್ರಸ್ತುತಪಡಿಸಿ ಚಿತ್ರಕತೆಯಾಗಿ ನಿರ್ದೇಶನ ಮಾಡುವ ಯೋಜನೆ ಇದಗಿದೆ.
ಬದುಕುಳಿಯುವ ವಿಷಯಗಳಿಗೆ ಒತ್ತು ನೀಡುವ ದೃಶ್ಯ ಆವಿಷ್ಕಾರಗಳನ್ನು ಮಕ್ಕಳು ಪ್ರಸ್ತುತಪಡಿಸುವ ಮೂಲಕ ದಮನಕ್ಕೊಳಗಾಗಿರುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದು ಇದರ ಗುರಿಯಾಗಿದೆ. ವಿವಿಧ ಹಂತಗಳಲ್ಲಿ ಆಯೋಜಿಸುವ ಜಿಲ್ಲಾ ಮಟ್ಟದ ಕಿರುಚಿತ್ರೋತ್ಸವ ಮುಂತಾದವುಗಳನ್ನು ಆಯೋಜಿಸಲಾಗಿತ್ತು.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಶಿಬಿರ ಉದ್ಘಾಟಿಸಿದರು. ಈ ಸಂದರ್ಭ ಎಸ್ಸಸ್ಸೆಲ್ಸಿ ಹಾಗೂ ಪ್ಲಸುಟು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತರಬೇತುದಾರರಾದ ನಿರ್ಮಲ್ ಕಾಡಗಮ್ , ಉದಯ್ ಸಾರಂಗ್, ಕೃಷ್ಣಪ್ಪ ಬಂಬಿಲ, ವರ್ಷಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎಸ್.ಯದುರಾಜ್ ಶಿಬಿರ ನಿರ್ವಹಿಸಿದರು.