ಹರಾರೆ: ತೀವ್ರ ಬರ ಪರಿಸ್ಥಿತಿಯಿಂದಾಗಿ ಜಿಂಬಾಬ್ವೆಯ ಶೇ 50ರಷ್ಟು ಜನಸಂಖ್ಯೆಯು ಆಹಾರ ಮತ್ತು ನೀರಿನ ತೀವ್ರ ಕೊರತೆಯಿಂದ ಬಳಲುತ್ತಿದೆ, 430 ಮಿಲಿಯನ್ ಡಾಲರ್ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಹರಾರೆ: ತೀವ್ರ ಬರ ಪರಿಸ್ಥಿತಿಯಿಂದಾಗಿ ಜಿಂಬಾಬ್ವೆಯ ಶೇ 50ರಷ್ಟು ಜನಸಂಖ್ಯೆಯು ಆಹಾರ ಮತ್ತು ನೀರಿನ ತೀವ್ರ ಕೊರತೆಯಿಂದ ಬಳಲುತ್ತಿದೆ, 430 ಮಿಲಿಯನ್ ಡಾಲರ್ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಕಳೆದ 4 ದಶಕಗಳ ಅವಧಿಯಲ್ಲೇ ಗಂಭೀರವಾದ ಪರಿಸ್ಥಿತಿಯನ್ನು ಜಿಂಬಾಬ್ವೆ ಎದುರಿಸುತ್ತಿದೆ.
ಜಿಂಬಾಬ್ವೆಯ ಶೇ 60ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದಾರೆ. ಹೆಚ್ಚಿನವರು ಮಾರುಕಟ್ಟೆಯಲ್ಲಿ ಆಹಾರ ಖರೀದಿಸಲೂ ಅಶಕ್ತರಾಗಿದ್ದಾರೆ. ಬರುವ ತಿಂಗಳುಗಳಲ್ಲಿ ಜೀವಹಾನಿ ತಪ್ಪಿಸಲು ತಕ್ಷಣದ ಕ್ರಮ ಅಗತ್ಯವಿದೆ ಎಂದಿದ್ದಾರೆ.