ಕಾಸರಗೋಡು: ಕೊಚ್ಚಿ ಕನ್ನಡ ಸಂಘ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕೊಚ್ಚಿನ್ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಮೇ 26 ರಂದು ನಡೆಯಲಿರುವ 'ಕೊಚ್ಚಿನ್ ಕನ್ನಡ ಸಂಸ್ಕøತಿ ಉತ್ಸವ'ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕೊಚ್ಚಿನ್‍ನ ಸಂಘದ ಕಚೇರಿಯಲ್ಲಿ ಜರುಗಿತು.
ಕೊಚ್ಚಿನ್ ಮಹಾನಗರ ಪಾಲಿಕೆ ಮಹಾಪೌರ ವಕೀಲ ಎಂ.ಅನಿಲ್ ಕುಮಾರ್ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು ಸಮಾರಂಭದಲ್ಲಿ ಕೊಚ್ಚಿನ್ ಕನ್ನಡ ಸಂಘ ಅಧ್ಯಕ್ಷ ಡಿ ಶ್ರೀನಿವಾಸ ರಾವ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ ಆರ್ ಸುಬ್ಬಯಕಟ್ಟೆ, ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶಿವನಾಥ ಕೌಡಿ, ವಿಜಯಕುಮಾರ ತಂತ್ರಿ, ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್ ನಾಸಿ, ಕಾರ್ಯದರ್ಶಿ ಹರೀಶ್, ಜತೆ ಕಾರ್ಯದರ್ಶಿಗಳಾದ ಪರಿಣಿತ ರವಿ, ಎಂ ತ್ಯಾಗರಾಜ್ ಮುಮೊದಲದವರು ಪಾಲ್ಗೊಂಡಿದ್ದರು.