ಕಾಸರಗೋಡು: ಕುಂಬಳೆ ಶೇಡಿಕವು-ಕಂಚಿಕಟ್ಟೆ-ಚೂರಿತ್ತಡ್ಕ ಲೋಕೋಪಯೋಗಿ ರಸ್ತೆಯ ಕಂಚಿಕಟ್ಟೆ ಸೇತುವೆ (ವಿಸಿಬಿ ಕಮ್ ಬ್ರಿಡ್ಜ್)ಯನ್ನು ಶಿಥಿಲಗೊಂಡಿರುವ ಕಾರಣಕ್ಕೆ ಸಂಪೂರ್ಣ ಮುಚ್ಚುಗಡೆಗೊಳಿಸಿದ ಕ್ರಮ ಖಂಡಿಸಿ ಐಕ್ಯರಂಗ ಕುಂಬಳೆ ಪಂಚಾಯಿತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸೇತುವೆ ಮುಚ್ಚಿರುವುದರಿಂದ ಮಳಿ, ಕುಂಡಾಪು, ಕಂಚಿಕಟ್ಟೆ, ಕೆಳಗಿನಕೋಡಿಯಮ್ಮ, ಆರಿಕ್ಕಾಡಿ, ಚೂರಿತ್ತಡ್ಕ, ಛತ್ರಂ ಪಳ್ಳಂ, ಉಜಾರ್ ಮುಂತಾದ ಪ್ರದೇಶದ ಜನತೆ ಸಮಸ್ಯೆ ಅನುಭವಿಸುವಂತಾಗಿದೆ. ಪ್ರಸ್ತಾವಿತ ವಿಸಿಬಿ ಕಮ್ ಬ್ರಿಡ್ಜ್ ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜತೆಗೆ ಕನಿಷ್ಠ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ವಿದ್ಯಾನಗರ ಬಿ.ಸಿ.ರೋಡ್‍ನಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರನ್ನು ಪೆÇಲೀಸರು ಜಿಲ್ಲಾಧಿಕಾರಿ ಕಚೇರಿ ಎದುರು ತಡೆದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಧರಣಿ ಉದ್ಘಾಟಿಸಿದರು. ಐಕ್ಯರಂಗ ಪಂಚಾಯಿತಿ ಸಮಿತಿ ಅಧ್ಯಕ್ಷ ಬಿ.ಎನ್.ಮುಹಮ್ಮದಲಿ ಅಧ್ಯಕ್ಷತೆ ವಹಿಸಿದ್ದರು.
ಐಕ್ಯರಂಗ ಸಂಚಾಲಕ ಮಂಜುನಾಥ ಆಳ್ವ, ಮುಸ್ಲಿಂ ಲೀಗ್ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಎ.ಕೆ. ಆರೀಫ್, ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯು.ಪಿ.ತಾಹಿರಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಮೀಲಾ ಸಿದ್ದೀಕ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಪಂಚಾಯತ್ ಉಪಾಧ್ಯಕ್ಷ ನಾಸಿರ್ ಮೊಗ್ರಾಲ್, ಲಕ್ಷ್ಮಣ ಪ್ರಭು ಸೈಯದ್ ಹದೀಸ್ ಮೊಗ್ರಾಲ್, ಗ್ರಾಮ ಪಂಚಾಯಿತಿ ಸದಸ್ಯರಾದ ರೆಹಮಾನ್ ಆರಿಕ್ಕಾಡಿ, ಯೂಸುಫ್ ಉಳುವಾರ್, ಅಜೀಜ್ ಕಳತ್ತೂರು, ಎಂ.ಪಿ.ಖಾಲೀದ್, ಸಿದ್ದೀಕ್ ದಂಡಗೋಳಿ, ಅಶ್ರಫ್ ಕೋಡಿಯಮ್ಮ, ಅಬ್ಬಾಸ್ ಕೋಡಿಯಮ್ಮ, ಮುಹಮ್ಮದ್‍ಕುಞÂ ಆರಿಕಾಡಿ, ರಾಮ ಕಾರ್ರ್ಲೆ, ಸತ್ತಾರ್ ಆರಿಕಾಡಿ, ಎ ಮೊಯ್ದಿನ್‍ಕುಞÂ, ಅಬ್ದುಲ್ ರಹಿಮಾನ್ ರಾಡೋ, ಕೆ.ಎಂ.ಮೊಹಮ್ಮದ್, ಕೆ.ಎಂ. ರಫೀಕ್, ಮೂಸಾ ಹಾಜಿ ಕೋಹಿನೂರ, ಲಕ್ಷ್ಮಣ ಕುಂಡಾಪು, ಆಯೇಷಾ ಹೈದರ್, ಅಬ್ಬಾಸ್ ಎಂ.ಬಿ., ಬಿ.ಕೆ. ಅಬ್ದುಲ್ಲ, ಸಿದ್ದಿಕ್ ಊಜಾರ್, ನೌಫಲ್ ಕೋಡಿಯಮ್ಮ, ಖಾಲಿದ್ ಕುಂಡಾಪು ಉಪಸ್ಥೀತರಿದ್ದರು. ಸಂಚಾಲಕ ರವಿ ಪೂಜಾರಿ ಸ್ವಾಗತಿಸಿದರು.