ನವದೆಹಲಿ: ಮಲೇರಿಯಾ ವಿರುದ್ಧ ಹೋರಾಡಲು ಭಾರತೀಯ ವಿಜ್ಞಾನಿಗಳು ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ವಿಜ್ಞಾನಿಗಳು ನಡೆಸಿದ ಹೊಸ ಆವಿಷ್ಕಾರ ಯಶಸ್ವಿಯಾಗಿದೆ.
ಮಾಲಿಕ್ಯೂಲರ್ ಮೆಡಿಸಿನ್ ವಿಶೇಷ ಕೇಂದ್ರದ ಪ್ರಾಧ್ಯಾಪಕ ಶೈಲ್ಜಾ ಸಿಂಗ್ ಮತ್ತು ಆನಂದ್ ರಂಗನಾಥನ್ ಅವರು ಸಂಶೋಧನೆಯ ನೇತೃತ್ವ ವಹಿಸಿದ್ದರು.
ಅವರ ಸಂಶೋಧನೆಗಳನ್ನು ಸೆಲ್ ಪ್ರೆಸ್‍ನ iScience ಜರ್ನಲ್‍ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆಯು ಪರಾವಲಂಬಿಯಲ್ಲಿ ಮಲೇರಿಯಾ ಪೆÇ್ರಹಿಬಿಟಿನ್ ಎಂಬ ಪ್ರೋಟೀನ್ ಅನ್ನು ಗುರಿಯಾಗಿಸುವತ್ತ ಗಮನಹರಿಸಿದೆ.
ಮಲೇರಿಯಾ ಎಂಬುದು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ. ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಹರಡುವ ಈ ರೋಗವು ಭಾರತ ಸೇರಿದಂತೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ವಿಶ್ವಾದ್ಯಂತ ಮಲೇರಿಯಾವನ್ನು ನಿಯಂತ್ರಿಸುವ ಪ್ರಯತ್ನಗಳ ಹೊರತಾಗಿಯೂ, ಸಾವಿನ ಸಂಖ್ಯೆಯು ಆತಂಕಕಾರಿಯಾಗಿದೆ. 2022 ರ ಹೊತ್ತಿಗೆ, ಅಂದಾಜು 249 ಮಿಲಿಯನ್ ಪ್ರಕರಣಗಳು ಮತ್ತು 60,800 ಸಾವುಗಳು ಜಾಗತಿಕವಾಗಿ ಸಂಭವಿಸಿವೆ.
ವಿಶ್ವಾದ್ಯಂತ, ವಾರ್ಷಿಕವಾಗಿ 35 ರಿಂದ 50 ಮಿಲಿಯನ್ ಜನರು ಮಲೇರಿಯಾದಿಂದ ಸೋಂಕಿಗೆ ಒಳಗಾಗುತ್ತಾರೆ. ಕನಿಷ್ಠ 30 ಲಕ್ಷ ಜನರು ಸಾಯುತ್ತಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಗರ್ಭಿಣಿಯರು. ಇದನ್ನು ಎದುರಿಸಲು ಅಭಿವೃದ್ಧಿಪಡಿಸಿದ ಲಸಿಕೆ ಜಾಗತಿಕ ಮಟ್ಟದಲ್ಲಿ ಭಾರಿ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ವೈಜ್ಞಾನಿಕ ಜಗತ್ತು ಆಶಿಸುತ್ತಿದೆ.