HEALTH TIPS

ಮಧ್ಯಪ್ರದೇಶ: ಹುಲಿ ದಾಳಿಗೆ ವ್ಯಕ್ತಿ ಬಲಿ

           ಭೋಪಾಲ್‌: ಹುಲಿಯು ವ್ಯಕ್ತಿಯೊಬ್ಬರನ್ನು ಕೊಂದು, ದೇಹದ ಭಾಗಗಳನ್ನು ತಿಂದು ಹಾಕಿರುವ ಘಟನೆ ಮಧ್ಯ ಪ್ರದೇಶದ ರಾಯ್‌ಸೇನ್‌ ಜಿಲ್ಲೆಯ ಅರಣ್ಯದಲ್ಲಿ ನಡೆದಿದೆ.

            ಭೋಪಾಲ್‌ ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ನೀಮ್‌ಖೇಡ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

            ಬುಧವಾರ ಮಣಿರಾಮ್‌ ಜಾತವ್‌ (62) ಎಂಬುವವರು ಟೆಂಡು ಎಲೆಗಳನ್ನು ಸಂಗ್ರಹಿಸಲು ಕಾಡಿಗೆ ಹೋದ ವೇಳೆ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಮಣಿರಾಮ್ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದೆ. ಕೊರಳಿನಲ್ಲಿರುವ ಕೋರೆಹಲ್ಲುಗಳ ಗುರುತಿನಿಂದ ಮಣಿರಾಮ್‌ ಅವರನ್ನು ಹುಲಿ ಕೊಂದಿರುವುದು ತಿಳಿದುಬಂದಿದೆ.

              60ಕ್ಕೂ ಹೆಚ್ಚು ಹುಲಿಗಳಿರುವ ರಾತಪಾನಿ ವನ್ಯಜೀವಿ ಧಾಮದಿಂದ ಹುಲಿ ಹೊರಗೆ ಬಂದಿರಬೇಕು. ಮೃತ ವ್ಯಕ್ತಿಯ ಕುಟುಂಬಕ್ಕೆ ₹8 ಲಕ್ಷ ಪರಿಹಾರ ನೀಡಲಾಗಿದೆ. ಗ್ರಾಮಸ್ಥರಿಗೆ ಅರಣ್ಯಕ್ಕೆ ತೆರಳದಂತೆ ಮನವಿ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries