ಫ್ಯಾಷನ್ ಲೋಕದಲ್ಲಿಂದು ಎಷ್ಟೆಲ್ಲಾ ಫ್ಯಾಷನ್‌ಗಳು ಬಂದಿವೆ ಅಂದ್ರೆ ನೀವು ನಿತ್ಯವು ಒಂದಲ್ಲಾ ಒಂದು ರೀತಿಯ ಹೊಸ ಹೊಸ ಫ್ಯಾಷನ್‌ಗಳ ನೋಡುತ್ತಲೇ ಇರುತ್ತೀರಿ. ಇದರ ಜೊತೆಗೆ ಒಂದು ಕಾಲದಲ್ಲಿ ಜೀನ್ಸ್ ಹುಟ್ಟಿಕೊಂಡ ಬಳಿಕವಂತೂ ಫ್ಯಾಷನ್ ಯುಗ ಮತ್ತಷ್ಟು ಸುಂದರವಾಯಿತು.
ಸುಮಾರು 150 ವರ್ಷದ ಹಿಂದೆ ಈ ಜೀನ್ಸ್ ಯುಗ ಆರಂಭವಾಯಿತು ಎಂದು ಅಂದಾಜಿಸಲಾಗಿದೆ. ಇಂದಿಗೂ ಈ ಜೀನ್ಸ್ ಯುವ ಜನತೆಯ ಹಾಟ್ ಫೇವರಿಟ್, ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಇಂದು ಜೀನ್ಸ್ ಹಾಕುತ್ತಾರೆ. ಎಲ್ಲರಿಗೂ ಇದು ಇಷ್ಟವೂ ಸಹ ಹೌದು.
ಇತ್ತ ಯುವತಿಯರು ಸಹ ಈ ಜೀನ್ಸ್‌ನ ಸೌಂದರ್ಯಕ್ಕೆ ಮಾರು ಹೋಗಿದ್ದು ಅವರು ಸಹ ಪುರುಷರಂತೆ ಜೀನ್ಸ್ ಹಾಕುತ್ತಾರೆ. ಈಗ ಜವಳಿ ಉದ್ಯಮ ಎಷ್ಟು ದೊಡ್ಡ ಮಟ್ಟಕ್ಕೆ ಬೆಳದಿದೆ ಅಂದ್ರೆ ನೀವು ಊಹಿಸಲು ಸಹ ಸಾಧ್ಯವಿಲ್ಲ. ಈ ಜೀನ್ಸ್‌ನಲ್ಲಿ ಹತ್ತು ಹಲವು ವಿಧಗಳು ಸಹ ಬಂದಿವೆ. ಅವುಗಳ ಬಳಕೆಯನ್ನೂ ಸಹ ನಾವು ನೋಡುತ್ತಿದ್ದೇವೆ.
ಆದ್ರೆ ನೀವು ಜೀನ್ಸ್ ಪ್ಯಾಂಟ್ ಹಾಕಿದಾಗ ಅದರ ವಿನ್ಯಾಸದ ಕುರಿತು ಎಂದಾದರು ಗಮನ ಹರಿಸಿದ್ದೀರಾ? ಜೀನ್ಸ್ ಪ್ಯಾಂಟ್‌ಗಳು ವಿನ್ಯಾಸದಲ್ಲಿ ಒಂದೇ ರೀತಿ ಇರುತ್ತವೆ. ಆದರೆ ಜೀನ್ಸ್ ಪ್ಯಾಂಟ್‌ನ ಜೇಬಿನ ಹತ್ತಿರ ಕಾಪರ್‌ನ ಎರಡು ಸಣ್ಣ ಲೋಹವಿರುವುದನ್ನು ನೀವು ಗಮನಿಸಿದ್ದೀರಾ?
ಎಲ್ಲಾ ಜೀನ್ಸ್ ಫ್ಯಾಂಟ್‌ನ ಜೇಬಿನ ಬಳಿ ಸಣ್ಣದಾದ ಎರಡು ಬಟನ್‌ಗಳಿರುತ್ತವೆ. ಇದು ಏಕಿರುತ್ತದೆ. ಇದರ ಲಾಭ ಏನು? ಮೊದಲು ಇದನ್ನು ಏಕೆ ಬಳಸಿದರು? ಈ ಕುರಿತ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಜೀನ್ಸ ಹರಿಯದಂತೆ ಕಾಪಾಡಲು ಈ ಬಟನ್ ಬಳಕೆ
ಈ ರೀತಿಯ ಬಟನ್‌ಗಳು ಹುಟ್ಟಿಕೊಂಡಿದ್ದು 1873 ರಲ್ಲಿ, ಮೊದಲು ಲೆವಿ ಸ್ಟ್ರಾಸ್ ಎಂಬಾತ ಈ ವಿನ್ಯಾಸದ ಪೇಟೆಂಟ ಪಡೆದುಕೊಂಡಿದ್ದ. ಮೊದಲು ಈ ಬಟನ್‌ಗಳು "XX" ಪ್ಯಾಂಟ್ ಎಂದು ಗುರುತಿಸಲು ಬಳಸಲಾಗುತ್ತಿತ್ತು. ಬಳಿಕ ಇವುಗಳಿಗೆ 501 ಎಂದು ಸಹ ಕರೆಯಲಾಯಿತು. ಈ ಬಟನ್‌ಗಳನ್ನು ದುರ್ಬಲ ಸ್ಟಿಚಿಂಗ್ ಅಥವಾ ಸುಲಭವಾಗಿ ಹರಿಯಬಹುದಾದ ಜಾಗದಲ್ಲಿ ಬಳಸಲಾಗುತ್ತಿತ್ತು. ನಂತರ ಇದು ಜೀನ್ಸ ಪ್ಯಾಂಟ್‌ಗೆ ಕಡ್ಡಾಯ ಎನ್ನುವಂತೆ ಬಳಕೆಗೆ ಬಂದಿತು.
ಮೊದಲು ಅಲಂಕಾರಿಕ ವಸ್ತವಿನಂತೆ ಇದನ್ನು ಬಳಸಲಾಯಿತು, ಆದರೆ ಬರು ಬರುತ್ತಾ ಜೀನ್ಸ್ ಯಾವ ಭಾಗದಲ್ಲಿ ಹೆಚ್ಚಾಗಿ ಹರಿದುಕೊಳ್ಳುವುದು, ಹೊಲಿಗೆ ಬಿಡುವುದು ಆಗುತ್ತಿತ್ತೋ ಅಂತಹ ಸ್ಥಳದಲ್ಲಿ ಇವುಗಳನ್ನು ಬಳಸಲಾಯಿತು. ಇದು ಬಹುಪಾಲು ಯಶಸ್ವಿಯೂ ಆಗಿತ್ತು.
ಒಂದು ಜೀನ್ಸ ಪ್ಯಾಂಟ್ ಫ್ಯಾಕ್ಟರಿಯಿಂದ ಹೊರಬಂದು ಗ್ರಾಹಕನ ಕೈ ಸೇರಿದರೆ ಅದು ಬರೋಬ್ಬರಿ 30 ಬಾರಿಯಾದರು ತೊಳೆಯುವಿಕೆಯನ್ನು ತಡೆದುಕೊಳ್ಳಬೇಕಂತೆ. ಈ ವಿನ್ಯಾಸ ಎಲ್ಲಾ ದೊಡ್ಡ ದೊಡ್ಡ ಕಂಪನಿಗಳ ಕಣ್ಣಿಗೆ ಬಿತ್ತು, ನಂತರ ಎಲ್ಲಾ ಕಂಪನಿಗಳು ಇದನ್ನೇ ಮುಂದುವರೆಸಿದವು. ಈಗ ಎಲ್ಲಾ ಪ್ಯಾಂಟ್‌ಗಳಲ್ಲು ವಿನ್ಯಾಸ ನೋಡಬಹುದು.
ಆದ್ರೆ ಜೀನ್ಸ್ ಪ್ಯಾಂಟ್ ಧರಿಸುವುದನ್ನು ಹಲವು ನಿಷೇಧ ಸಹ ಮಾಡಿವೆ. ಅದರಲ್ಲೂ 19ನೇ ಶತಮಾನದಲ್ಲಿ ಜೀನ್ಸ್ ಹಲವು ದೇಶದಲ್ಲಿ ಬ್ಯಾನ್ ಆಗಿತ್ತು. ಇದಕ್ಕೆ ಹಲವು ಕಾರಣವನ್ನೂ ಸಹ ನೀಡಲಾಗಿತ್ತು. ಹೀಗೆ ಜೀನ್ಸ ಬೆಳೆದು ಬರುತ್ತಾ ಜೇಬಿನ ಒಳಗೆ ಮತ್ತೊಂದು ಸಣ್ಣ ಜೇಬಿನ ವಿನ್ಯಾಸವು ಸಹ ಬಳಕೆಗೆ ಬಂತು. ಹಲವರು ಇದನ್ನು ನಾಣ್ಯಗಳ ಇಡಲು ಎನ್ನುತ್ತಿದ್ದರು. ಈ ರೀತಿ ನೂರಾರು ಮೈಲಿಗಳ ದಾಟಿ ಈ ಜೀನ್ಸ್ ಬೆಳೆದು ಬಂದಿದೆ.