ಕೋಝಿಕ್ಕೋಡ್: ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ದೂರಿನ ಮೇರೆಗೆ ವೈದ್ಯಕೀಯ ಕಾಲೇಜಿನ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ಕು ವರ್ಷದ ಬಾಲಕಿಗೆ ಬೆರಳಿನ ಬದಲಾಗಿ ನಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಪ್ರಕರಣ ಇದಾಗಿದೆ.
ವೈದ್ಯರು ವೃತ್ತಿಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಗುವಿನ ಪೋಷಕರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಪೋಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಡಾ. ಬ್ಜಾನ್ ಜಾನ್ಸನ್ ಅವರನ್ನು ಈ ಹಿಂದೆ ತನಿಖೆಗಾಗಿ ಅಮಾನತುಗೊಳಿಸಲಾಗಿತ್ತು. ಮಗುವಿನ ಬೆರಳಿಗೆ ಆಪರೇಷನ್ ಮಾಡುವ ಬದಲು ನಾಲಿಗೆ ಆಪರೇಷನ್ ಮಾಡಿರುವುದಾಗಿ ವೈದ್ಯರು ಒಪ್ಪಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಕುಟುಂಬದ ಅನುಮತಿ ಪಡೆದಿಲ್ಲ ಎಂದು ವೈದ್ಯರು ಬರೆದುಕೊಟ್ಟ ದಾಖಲೆಯನ್ನೂ ಬಿಡುಗಡೆ ಮಾಡಲಾಗಿದೆ. ಇದನ್ನು ಆಧರಿಸಿ ಅವರನ್ನು ಅಮಾನತುಗೊಳಿಸಲಾಗಿದೆ.
ವೈದ್ಯಕೀಯ ದೋಷವನ್ನು ಕೇರಳ ಸರ್ಕಾರ ಸಮರ್ಥಿಸಿಕೊಂಡಿದೆ. ಮೆಡಿಕಲ್ ಕಾಲೇಜು ಅಧ್ಯಾಪಕರ ಸಂಘ ದೊಡ್ಡ ಟೀಕೆಗೆ ಕಾರಣವಾಗಿದೆ.ಆದರೆ ತಮ್ಮ ತಪ್ಪುಗಳನ್ನು ಸಮರ್ಥಿಸಿರುವುಉದ ಅಚ್ಚರಿಮೂಡಿಸಿದೆ. ವೈದ್ಯಕೀಯ ದುರ್ಬಳಕೆಯ ಸುದ್ದಿ ತಪ್ಪುದಾರಿಗೆಳೆಯುವಂತಿದೆ. ಮಗುವಿನ ನಾಲಿಗೆ ಅಡಿಯಲ್ಲಿ ಗಂಟು ಇರುವುದನ್ನು ವೈದ್ಯರು ಗಮನಿಸಿದರು ಎಂದು ಕೆಜಿಎಂ ಸಿ ಟಿಎ ಯ ಸಮರ್ಥನೆಯಲ್ಲಿ ಹೇಳಲಾಗಿದೆ. ಮಗುವಿಗೆ ಯಾವುದೇ ಸ್ಪಷ್ಟವಾದ ಸಮಸ್ಯೆಗಳಿಲ್ಲದಿದ್ದರೂ ಭವಿಷ್ಯದಲ್ಲಿ ವಾಕ್ ದೌರ್ಬಲ್ಯ ಉಂಟಾಗುವ ಸಾಧ್ಯತೆಯಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದಿದೆ.
ನಾಲ್ಕು ವರ್ಷದ ಬಾಲಕಿಯ ಕೈಬೆರಳಲ್ಲಿದ್ದ ಆರನೇ ಬೆರಳನ್ನು ತೆಗೆಯುವುದಕ್ಕಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆರಳನ್ನು ತೆಗೆಯುವ ಮುನ್ನ ವೈದ್ಯರು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ತಪ್ಪಿನ ಅರಿವಾದಾಗ ಕೈಬೆರಳ ಶಸ್ತ್ರಚಿಕಿತ್ಸೆಯನ್ನೂ ನಡೆಸಿ ಮಗುವಿನ ಬೆರಳನ್ನು ತೆಗೆಯಲಾಯಿತು.