ಕಾಸರಗೋಡು: ಜೆಸಿಐ (ಜೂನಿಯರ್ ಚೇಂಬರ್ ಇಂಟರ್‍ನ್ಯಾಶನಲ್) ಹದಿನೆಂಟರಿಂದ ನಲವತ್ತು ವರ್ಷದೊಳಗಿನ ಯುವಜನತೆಯ ವಿಶ್ವದ ಅತಿದೊಡ್ಡ ಯುವ ಸಂಘಟನೆಯಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಜೆಸಿಐ ಇಂಡಿಯಾ ಝೋನ್ 19ಕ್ಕೆ ಸೇರಿದ ಜೆಸಿಐ ವಿದ್ಯಾನಗರದ ನೇತೃತ್ವದಲ್ಲಿ ಜೆಸಿಐ ಬದಿಯಡ್ಕ ಟೌನ್ ಎಂಬ ಸ್ಥಳೀಯ ಘಟಕವನ್ನು ಆರಂಭಿಸಲಾಗುತ್ತಿದೆ ಎಂದು ವಲಯ ಉಪಾಧ್ಯಕ್ಷ ಯತೀಶ್ ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 10ರಂದು ಸಂಜೆ 6.30ಕ್ಕೆ ಬದಿಯಡ್ಕ ಸನಿಹದ ಇರಾ ಹೆರಿಟೇಜ್ ರೆಸಾರ್ಟ್‍ನಲ್ಲಿ ಜರುಗಲಿದೆ. ಶಾಸಕ ಎನ್.ಎ ನೆಲ್ಲಿಕುನ್ನು ನೂತನ ಘಟಕ ಉದ್ಘಾಟಿಸುವರು.ವಲಯಾಧ್ಯಕ್ಷ ರಾಜೀಶ್ ಉದುಮ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಾಜಿ ವಲಯಾಧ್ಯಕ್ಷ ಅಬ್ದುಲ್ ಮಹ್ರೂಫ್ ಟಿ.ಎಂ ಮುಖ್ಯ ಭಾಷಣ ಮಾಡುವರು. ವಲಯ ಉಪಾಧ್ಯಕ್ಷ ಯತೀಶ್ ಬಲ್ಲಾಳ್, ಇಲ್ಯಾಸ್ ಎ.ಎ, ರಮ್ಲಾ ಅಶ್ರಫ್, ಶರತ್ ಕುಮಾರ್, ರಶೀದ್ ಕೆ.ಎಚ್, ಸಾಬಿತ್ ಬದಿಯಡ್ಕ, ಚಂದ್ರಶೇಖರ ಎ.ಎನ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬದಿಯಡ್ಕ ಟೌನ್ ನಿಯೋಜಿತ ಅಧ್ಯಕ್ಷ ಶರತ್ ಕುಮಾರ್, ವಿದ್ಯಾನಗರ ಜೆ. ಸಿ. ಐ ಅಧ್ಯಕ್ಷೆ ರಮ್ಲಾ ಅಶ್ರಫ್ ಎಂ.ಎ.ಎಚ್, ಕಾರ್ಯಕ್ರಮ ನಿರ್ದೇಶಕ ರಶೀದ್ ಕೆ. ಎಚ್, ಬದಿಯಡ್ಕ, ಟೌನ್ ಘಟಕ ನಿಯೋಜಿತ ಕಾರ್ಯದರ್ಶಿ ಸಾಬಿತ್ ಬದಿಯಡ್ಕ, ಕೋಶಾಧಿಕಾರಿ ಚಂದ್ರ ಶೇಖರ್ ನಾರಂಪಾಡಿ, ರಾಜ್ ನೀಲಾಂಬರಿ, ನೌಫಲ್ ಕುಂಬ್ಡಾಜೆ ಉಪಸ್ಥಿತರಿದ್ದರು.