HEALTH TIPS

ರಾಜ್ಯಪಾಲರ ಭೇಟಿ ಮಾಡಿದ ಪತ್ರಕರ್ತರ ಸಂಘದ ನಿಯೋಗ: ಮಾಧ್ಯಮ ಜವಬ್ದಾರಿಯನ್ನು ಶ್ಲಾಸಿದ ರಾಜ್ಯಪಾಲ ಗೆಹ್ಲೋಟ್


               ಬೆಂಗಳೂರು:   ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು ರಾಜ್ಯಪಾಲ ಥಾಮರ್ ಚಂದ್ ಗೆಹ್ಲೋಟ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿತ್ತು.

                ಕೆಯುಡಬ್ಲೂೃಜೆ ಹೊರನಾಡಿನ ಘಟಕವಾಗಿರುವ ಕಾಸರಗೋಡು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಆಯೋಜಿಸಲಿರುವ ಪತ್ರಕರ್ತರ ಸಮಾರಂಭಕ್ಕೆ ಆಗಮಿಸಬೇಕು ಎಂದು ವಿನಂತಿಸಿತು.

            ಸರ್ಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಮತ್ತು ಪತ್ರಕರ್ತರು, ತಮ್ಮದೇ ಆದ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು, ಸಾಮಾಜದ ಸ್ವಾಸ್ತ್ಯ  ಕಾಪಾಡುತ್ತಿದ್ದಾರೆ ಎಂದು ಶ್ಲಾಸಿದರು.

               ಕೆಯುಡಬ್ಲೂೃಜೆ ಹುಟ್ಟು ಹಾಕಿದ ಸಾಹಿತಿ ಮತ್ತು ಪತ್ರಕರ್ತ ಡಿ.ವಿ.ಗುಂಡಪ್ಪ ಅವರ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನೀಡಿದ ಮಾಹಿತಿ ತಿಳಿದುಕೊಂಡ ರಾಜ್ಯಪಾಲರು, ಅವರ ಆದರ್ಶದಲ್ಲಿ ಈಗಲೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆ ಕೆಯುಡಬ್ಲೂೃಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

               ತಾವು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಕೇರಳ ಮತ್ತು ಕಾಸರಗೋಡು ಭಾಗಕ್ಕೆ ಭೇಟಿ ನೀಡಿದ ನೆನಪುಗಳನ್ನು ಮೆಲುಕು ಹಾಕಿದ ರಾಜ್ಯಪಾಲರು, ಗಡಿನಾಡು ಕಾಸರಗೋಡಿನ ಬಹುಭಾಷಾ ನೆಲದಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮ ಅಪೂರ್ವವಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.

                ಕನ್ನಡಿಗರು ಹೆಚ್ಚಾಗಿರುವ ಮತ್ತು ಕನ್ನಡದ ಪತ್ರಿಕೆಗಳನ್ನು ಓದುವ ಜನರಿರುವ ಪ್ರದೇಶವಾಗಿರುವ ಕಾಸರಗೋಡು ಜನರು ಈಗಲೂ ಭಾವನಾತ್ಮಕವಾಗಿ ಕನ್ನಡಿಗರ ಜೊತೆಗೆ ಅವಿನಾಭಾವ ಸಂಬಂದ ಹೊಂದಿದ್ದಾರೆ. ಆದ್ದರಿಂದ ಕಾಸರಗೋಡಿನಲ್ಲಿ ಕನ್ನಡ ಪತ್ರಕರ್ತರ ಬಳಗವೇ ಈ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ ಎಂದು ಕಾಸರಗೋಡು ಜಿಲ್ಲಾ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟಿ ವಿವರಿಸಿದರು.

               ರಾಜ್ಯ ಘಟಕದ ಖಜಾಂಜಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಕಾಸರಗೋಡು ಘಟಕದ ಜಿಲ್ಲಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಾರ್ಯದರ್ಶಿ ಪುರುಷೋತ್ತಮ ಭಟ್ ಕೆ. , ಖ್ಯಾತ ಗಾಯಕ, ಹವ್ಯಾಸಿ ಬರಹಗಾರ ಗೋ.ನಾ.ಸ್ವಾಮಿ ನಿಯೋಗದಲ್ಲಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries