ಹರ್ಯಾಣ ಹಾಗೂ ದಿಲ್ಲಿ ಸೇರಿದಂತೆ ಉತ್ತರಭಾರತದ ಹಲವು ಭಾಗಗಳು ತೀವ್ರವಾದ ಉಷ್ಣಮಾರುತದ ಬೇಗೆಗೆ ಸಿಲುಕಿದ್ದು, ರಾಷ್ಟ್ರ ರಾಜಧಾನಿಯ ನಜಾಫ್ ಗಡ ಪ್ರದೇಶದಲ್ಲಿ ತಾಪಮಾನವು ಮಂಗಳವಾರ ದೇಶದಲ್ಲೇ ಅತ್ಯಂತ ಗರಿಷ್ಠ 47.4 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ.

ರಾಜಸ್ತಾನ, ಹರ್ಯಾಣ, ದಿಲ್ಲಿ, ಚಂಡಿಗಢ ಹಾಗೂ ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ಗಿಂತಲೂ ಅಧಿಕವಾಗಿದ್ದು, ದೈನಂದಿನ ಜನಜೀವನವನ್ನು ಕಂಗೆಡೆಸಿದೆ. ಬಿಸಿಲ ಝಳವನ್ನು ಸಹಿಸಲಾಗದೆ ಬಹುತೇಕ ಮಂದಿ ಇಂದು ಮಧ್ಯಾಹ್ನ ಹೊರಬಾರದೆ ಮನೆಯೊಳಗೆ ಉಳಿದುಕೊಂಡರು.
ಉಷ್ಣ ಮಾರುತ ಪರಿಸ್ಥಿತಿ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಕೆಲ ದಿನಗಳವರೆಗೆ ಶಾಲೆಗಳಿಗೆ ರಜೆಗಳನ್ನು ಘೋಷಿಸಬೇಕೆಂದು ಉತ್ತರ ಪ್ರದೇಶ, ರಾಜಸ್ತಾನ, ಪಂಜಾಬ್ ಸೇರಿದಂತೆ ಉತ್ತರಭಾರತದ ಹಲವು ರಾಜ್ಯ ಸರಕಾರಗಳು ಶಿಕ್ಷಣಸಂಸ್ಥೆಗಳಿಗೆ ಮನವಿ ಮಾಡಿವೆ. ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸುವ ಆಯ್ಕೆಯನ್ನು ಕೂಡಾ ಅವುಗಳಿಗೆ ನೀಡಿದೆ.
ಪಂಜಾಬ್ ಹಾಗೂ ಹರ್ಯಾಣದ ಜಂಟಿ ರಾಜಧಾನಿ ಚಂಡೀಗಡದಲ್ಲಿ ಬಿಸಿಲ ಝಳ ತೀವ್ರವಾಗಿದ್ದು 43.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.