ಕುಂಬಳೆ: ಕೋಟೆಕಣಿಯ ಶ್ರೀ ನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸು, ಗುಳಿಗ ಸನ್ನಿಧಿಯಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪುನ:ಪ್ರತಿಷ್ಠಾ ಕಲಶ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಪರಿವಾರದವರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ನೂತನ ಶಿಲಾಪೀಠಗಳ ಜಲಾದಿವಾಸ, ಕಲಶ ಪೂಜೆ, ಗಣಪತಿ ಹೋಮ, ಶ್ರೀ ನಾಗರಾಜ, ರಕ್ತೇಶ್ವರಿ, ಬ್ರಹ್ಮರಕ್ಷಸು ಹಾಗು ಗುಳಿಗ ಸಾನಿಧ್ಯಗಳ ಪುನ:ಪ್ರತಿಷ್ಠಾಪನೆ, ಪೀಠ ಕಲಶಾಭಿಷೇಕ, ತಂಬಿಲ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಆಶ್ಲೇಷ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಜನೆ, ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಭಂಡಾರ ಆಗಮನ, ತೊಡಂಙಲ್, ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ `ಹರಿಭಜನೆ ಮಾಡು', ಶ್ರೀ ರಕ್ತೇಶ್ವರಿ ಅಮ್ಮನ ದೈವದ ಕೋಲ, ದೈವದ ಮುಡಿ ಪ್ರಸಾದ, ಭಂಡಾರ ನಿರ್ಗಮನ, ಗುಳಿಗ ದೈವದ ಕೋಲ ನಡೆಯಿತು.