ತಿರುವನಂತಪುರಂ: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಭಾರೀ ಪ್ರಮಾಣದ ಚಿನ್ನದ ದಂಧೆ ನಡೆಯುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದ್ದು, 6.31 ಕೋಟಿ ಮೌಲ್ಯದ ಎಂಟು ಕಿಲೋ ಚಿನ್ನವನ್ನು ನಿನ್ನೆ ಒಂದೇದಿನ ವಿವಿಧೆಡೆ ವಶಪಡಿಸಿಕೊಳ್ಳಲಾಗಿದೆ.
ಡಿಆರ್‍ಐ ನೀಡಿದ ಸುಳಿವಿನ ಮೇರೆಗೆ ಏರ್ ಕಸ್ಟಮ್ಸ್ ಅಧಿಕಾರಿಗಳು ಮೂರು ಪ್ರತ್ಯೇಕ ಪ್ರಕರಣಗಳಿಂದ 5.9 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಡಿಆರ್‍ಐ ನೀಡಿದ ಮಾಹಿತಿ ಮೇರೆಗೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಮೂರು ಕಡೆಗಳಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಮೂವರು ಪ್ರಯಾಣಿಕರಿಂದ 2.08 ಕೋಟಿ ಮೌಲ್ಯದ ಚಿನ್ನ ವಶಪಡಿಸಲಾಗಿದೆ. ದೇಹದಲ್ಲಿ ಅವಿತಿರಿಸಿ ಕಳ್ಳಸಾಗಣೆ ಮಾಡುತ್ತಿದ್ದಾಗ ತಂಡ ಸಿಕ್ಕಿಬಿದ್ದಿದೆ.
ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ 28 ಲಕ್ಷ ಮೌಲ್ಯದ 430.97 ಗ್ರಾಂ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆÉ. ಜಿದ್ದಾದಿಂದ ಕೊಚ್ಚಿಗೆ ಬಂದಿದ್ದ ಮಲಪ್ಪುರಂ ಮೂಲದ ಸಿರಾಜುದ್ದೀನ್ ಎಂಬಾತನಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕಣ್ಣೂರು ವಿಮಾನ ನಿಲ್ದಾಣದಲ್ಲಿ 42 ಲಕ್ಷ ಮೌಲ್ಯದ 576 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಮೂಲದ ಮೊಹಮ್ಮದ್ ರಿಯಾಝ್ ಮತ್ತು ಮೊಹಮ್ಮದ್ ನಿಸಾರ್ ಅವರನ್ನು ಕಸ್ಟಮ್ಸ್ ಬಂಧಿಸಿದೆ.