ಇತ್ತೀಚನ ದಿನಗಳಲ್ಲಿ ಒತ್ತಡ ಮತ್ತು ಆತಂಕ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಜನ ಹೋದಲ್ಲಿ ಬಂದಲ್ಲಿ ಒತ್ತಡ ಎದುರಿಸಬೇಕಾಗಿದೆ. ಕೈಯಲ್ಲೇ ಜಗತ್ತನ್ನು ಇಟ್ಟುಕೊಂಡು ಓಡಾಡುತ್ತಿರುವಂತಹ ಇಂದಿನ ದಿನಗಳಲ್ಲಿ ಕ್ಷಣಕ್ಷಣವೂ ಒತ್ತಡವು ಹೆಚ್ಚಾಗುತ್ತಲೇ ಇದೆ. ಅದು ಮನೆಯಾಗಲಿ ಅಥವಾ ಕಚೇರಿಯಾಗಲಿ, ಒತ್ತಡದ ಬದುಕು ಸರ್ವೇಸಾಮಾನ್ಯ. ಹೀಗಾಗಿ ಒತ್ತಡದಿಂದ ದೂರಾಗಲು ಸದಾ ನಾವು ಪ್ರಯತ್ನಿಸುತ್ತಿರುತ್ತೇವೆ, ಆದರೆ ಇದು ಆತಂಕಕ್ಕೆ ಕಾರಣವಾಗುತ್ತದೆ.
ಅದರಲ್ಲೂ ನಾವಿಂದು ಈ ಮೊಬೈಲ್ ಅಥವಾ ಇಂಟರ್ನೆಟ್ ಒಂದು ನಿಮಿಷ ಇಲ್ಲದೆ ಇದ್ದರೂ ಏನೋ ಒಂದು ರೀತಿಯ ಆತಂಕ ಉಂಟಾಗುವುದು ಮತ್ತು ಇದರಿಂದ ಒತ್ತಡ ಹೆಚ್ಚಾಗುವುದು. ಈ ಗ್ಯಾಜೆಟ್‌ಗಳಿಂದ ನಾವು ಎಷ್ಟು ದೂರಾಗುತ್ತೇವೀ ಅಷ್ಟು ಉತ್ತಮ. ಆದರೆ ಕೆಲವರಿಗೆ ಈ ಗ್ಯಾಜೆಟ್‌ಗಳಿಂದ ದೂರ ಉಳಿದರೆ ಆತಂಕ ಎದುರಾಗುತ್ತದೆ. ಆದರೆ ಈ ಒತ್ತಡ ನಿವಾರಣೆಗೆ ಕೆಲವು ಆಹಾರ ಕ್ರಮಗಳಿವೆ.
ನಾವು ಸೇವಿಸಲು ಆಹಾರವು ಸಹ ನಮ್ಮ ಒತ್ತಡ ಹಾಗೂ ಆತಂಕವನ್ನು ಹತೋಟಿಯಲ್ಲಿಎಲು ಸಹಾಯ ಮಾಡುತ್ತದೆ. ಆಹಾರ ಪಥ್ಯದ ಕಡೆ ಗಮನಹರಿಸಿಕೊಂಡರೆ ಆತಂಕವನ್ನು ನಿವಾರಿಸಬಹುದಾಗಿದೆ. ಹಲವಾರು ರೀತಿಯ ಆಹಾರಗಳು ಆತಂಕವನ್ನು ನಿವಾರಿಸುವಲ್ಲಿ ಸಮರ್ಥವಾಗಿದೆ, ಎಂಬುದು ಸಾಬೀತು ಸಹ ಆಗಿದೆ.
ಕೆಲವೊಮ್ಮೆ ಯಾವುದಾದರೂ ಸಮಸ್ಯೆಗೆ ಸಿಲುಕಿ, ನಾವು ಆಳವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ, ಹೀಗಾದಾಗ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಾವು ಆತಂಕದಲ್ಲಿದ್ದಾಗ ನಮ್ಮ ಮನೋಭಾವ ಬೇರೆಯಾಗಿರುತ್ತದೆ, ನಾವು ಒತ್ತಡದಲ್ಲಿರುವಾಗಲೂ ನಮ್ಮ ಭಾವನೆ, ಸ್ಥಿತಿ ಬೇರೆ ಸ್ವರೂಪದಲ್ಲಿರುತ್ತದೆ.
ಹಾಗಾದರೆ ಒತ್ತಡ ಮತ್ತು ಆತಂಕವನ್ನು ದೂರ ಮಾಡಲು ಯಾವ ರೀತಿಯ ಆಹಾರ ಸೇವಿಸಬೇಕು. ಯಾವ ಆಹಾರ ಸೇವಿಸದರೆ ಈ ಅಂಶಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂಬುದನ್ನು ನಾವಿಂದು ನೋಡೋಣ.
ಆತಂಕ ಕಡಿಮೆ ಮಾಡಲು ನೀವು ಬೆರ್ರಿ ಹಣ್ಣುಗಳ ಸೇವಿಸಬಹುದು ಈ ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಪೈಥೋನ್ಯೂಟ್ರಿಯಂಟ್ಸ್‌ಗಳು ಅಧಿಕವಾಗಿದ್ದು ಇದರಿಂದ ನಿಮ್ಮಲ್ಲಿ ಆತಂಕ ಮತ್ತು ಒತ್ತಡ ನಿವಾರಣೆಗೆ ಸಹಾಯಕವಾಗಲಿದೆ. ಈ ಬೆರ್ರಿ ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಈ ಹಣ್ಣುಗಳನ್ನು ತಿಂದರೆ ಮನಸ್ಸು ತುಂಬಾ ಶಾಂತವಾಗಿರುತ್ತದೆ. ಇದಲ್ಲದೆ ನೀವು ಬಾದಾಮಿಯನ್ನು ಆಗಾಗ ಸೇವಿಸಯ ಅಭ್ಯಾಸ ಬೆಳೆಸಿಕೊಂಡರೆ ಉತ್ತಮ ಏಕೆಂದರೆ ಬಾದಾಮಿಯಲ್ಲಿ ಕಬ್ಬಿನ ಮತ್ತು ಸತು ಹೇರಳವಾಗಿದೆ. ಇದು ಮೆದುಳನ್ನು ಶಾಂತವಾಗಿರಿಸಿ ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಅಷ್ಟೇ ಅಲ್ಲದೆ ಕಲೆವೊಮ್ಮೆ ಆತಂಕಕ್ಕೆ ಕಾರಣವಾಗುವಂತಹ ಕೊರ್ಟಿಸೊಲ್ ಹಾರ್ಮೋನು ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ನಿತ್ಯವು ಹಸಿರು, ಹಳದಿ ಮತ್ತು ಕಿತ್ತಳೆ ಬಣ್ಣದ ತರಕಾರಿಗಳನ್ನು ಸೇವಿಸುವುದರಿಂದ ಮೆದುಳಿನಲ್ಲಿ ಸೆರೊಟಿನಿನ್ ಸ್ರವಿಸುವಿಕೆಗೆ ನೆರವಾಗುವುದು. ಈ ಸೆರೊಟಿನಿನ್ ನಮ್ಮ ದೇಹದಲ್ಲಿ ಆತಂಕ ಮತ್ತು ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳ ಮೇಲೆ ಹತೋಟಿ ತೆಗದುಕೊಳ್ಳುತ್ತದೆ. ಅಂದರೆ ಯಾವಾಗ ನಮ್ಮಲ್ಲಿ ಆತಂಕ ಉಂಟಾದಾಗ ಬಿಡುಗಡೆಯಾಗುವ ಹಾರ್ಮೋನುಗಳಿಗೆ ಕಡಿವಾಣ ಹಾಕಲಿದೆ. ಮಾಂಸಗಳಲ್ಲಿ ಸಹ ಈ ಸೆರೊಟಿನಿನ್ ಅಂಶ ಕಂಡುಬರುತ್ತದೆ.
ಇದಿಷ್ಟೇ ಅಲ್ಲದೆ ಸುಲಭವಾಗಿ ಸಿಗುವಂತಹ ಓಟ್ ಮೀಲ್‌ನಿಂದಲೂ ಸಹ ನಮ್ಮ ಒತ್ತಡ ಹಾಗೂ ಆತಂಕಕ್ಕೆ ಕಾರಣವಾಗುವ ಹಾರ್ಮೋನುಗಳ ಮೇಳೆ ಹಿಡಿತ ಸಾಧಿಸಬಹುದು. ಓಟ್ಸ್‌ನಲ್ಲಿ ಸಿಗುವ ಕಾರ್ಬೋಹೈಡ್ರೇಟ್ಸ್ ಗಳು ಮೆದುಳಿನಲ್ಲಿ ಸೆರೊಟೊನಿನ್ ಉತ್ಪತ್ತಿಯು ಉತ್ತೇಜಿಸಲ್ಪಡುವುದು. ಇದರಿಂದಾಗಿ ಕಾರ್ಬೊಹೈಡ್ರೇಟ್ಸ್ ಹೀರುವಿಕೆಯು ನಿಧಾನವಾಗುವುದು ಮತ್ತು ಸೆರೊಟೊನಿನ್ ಹರಿವು ಸ್ಥಿರವಾಗುತ್ತದೆ. ಇದರಿಂದ ನಿಮಗೆ ಯಾವುದೇ ಪರಿಸ್ಥಿತಿಯಲ್ಲಿ ಕೋಪ, ಆತಂಕ, ಒತ್ತಡ ಉಂಟಾದಾಗ ಪರಿಣಾಮಕಾರಿಯಾಗಿ ನಿಯಂತ್ರಣ ಸಾಧ್ಯವಾಗುತ್ತದೆ.