HEALTH TIPS

ಭಾರತೀಯರು ಹಿಂದೆಂದಿಗಿಂತಲೂ ಹೆಚ್ಚು ಐಷಾರಾಮಿ ಮನೆಗಳನ್ನು ಖರೀದಿಸುತ್ತಿದ್ದಾರೆ | ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಅನಾರಾಕ್ ಗ್ರೂಪ್ ನ ವರದಿ

           ನವದೆಹಲಿ:ಭಾರತದಲ್ಲಿ ಕಳೆದೈದು ವರ್ಷಗಳಲ್ಲಿ ಐಷಾರಾಮಿ ಮತ್ತು ಪ್ರೀಮಿಯಂ ಮನೆಗಳ ಮಾರಾಟದಲ್ಲಿ ಏರಿಕೆಯಾಗಿದೆ. 2019ರ ಮೊದಲ ತ್ರೈಮಾಸಿಕದಲ್ಲಿ ಶೇ.7ರಷ್ಟಿದ್ದ ಇಂತಹ ಮನೆಗಳ ಮಾರಾಟ ಪ್ರಮಾಣ 2024ರ ಮೊದಲ ತ್ರೈಮಾಸಿಕದಲ್ಲಿ ಶೇ.21ಕ್ಕೆ ಹೆಚ್ಚಿದೆ. ಇದೇ ಅವಧಿಯಲ್ಲಿ ಕೈಗೆಟಕುವ ದರಗಳಲ್ಲಿ ಮನೆಗಳ ಮಾರಾಟ ಶೇ.20ರಷ್ಟು ಕುಸಿತವನ್ನು ಕಂಡಿದೆ ಎಂದು ಶುಕ್ರವಾರ ಬಿಡುಗಡೆಗೊಂಡ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಅನಾರಾಕ್ ಗ್ರೂಪ್ನ ವರದಿಯು ತೋರಿಸಿದೆ.

                  ಈ ವರ್ಷದ ಮೊದಲ ತ್ರೈಮಾಸಿಕ (ಜನವರಿ-ಮಾರ್ಚ್)ದಲ್ಲಿ ದೇಶದ ಪ್ರಮುಖ ಏಳು ನಗರಗಳಲ್ಲಿ 1.30 ಲಕ್ಷ ಮನೆಗಳು ಮಾರಾಟವಾಗಿದ್ದು, ಇದರಲ್ಲಿ ಐಷಾರಾಮಿ ಮನೆಗಳ ಪಾಲು ಶೇ.21ರಷ್ಟಿದೆ (ಸುಮಾರು 27,070).

              ವರದಿಯ ಪ್ರಕಾರ ಐದು ವರ್ಷಗಳ ಹಿಂದೆ, 2019ರ ಮೊದಲ ತ್ರೈಮಾಸಿಕದಲ್ಲಿ ಐಷಾರಾಮಿ ಮನೆಗಳ ಪಾಲು ಕೇವಲ ಶೇ.7ರಷ್ಟಿದ್ದು,ಮೂರು ಪಟ್ಟು ಜಿಗಿತವನ್ನು ದಾಖಲಿಸಿದೆ.

                    2024ರ ಮೊದಲ ತ್ರೈಮಾಸಿಕದಲ್ಲಿ ಅಗ್ಗದ ದರಗಳ ವಿಭಾಗದಲ್ಲಿ ಸುಮಾರು 26,545 ಮನೆಗಳು ಮಾರಾಟಗೊಂಡಿವೆ. ಐದು ವರ್ಷಗಳ ಹಿಂದೆ ಇದೇ ಅವಧಿಯಲ್ಲಿ ಒಟ್ಟು ಮಾರಾಟಗೊಂಡ ಮನೆಗಳ ಪೈಕಿ ಅಗ್ಗದ ದರಗಳ ಮನೆಗಳ ಪಾಲು ಶೇ.37ರಷ್ಟಿದ್ದುದು ಈಗ ಶೇ.20ಕ್ಕೆ ಇಳಿದಿದೆ.

              ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ದಿಲ್ಲಿ-ಎನ್ಸಿಆರ್ನಲ್ಲಿ ಮಾರಾಟಗೊಂಡ 15,645 ಮನೆಗಳ ಪೈಕಿ 1.5 ಕೋಟಿ ರೂ.ಗೂ ಹೆಚ್ಚಿನ ಬೆಲೆಗಳ ಐಷಾರಾಮಿ ಮನೆಗಳು ಅತಿ ಹೆಚ್ಚು ಮಾರಾಟಗೊಂಡಿವೆ (6,060 ಮನೆಗಳು ಅಥವಾ ಶೇ.39). ಐದು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಮಾರಾಟವಾಗಿದ್ದ ಒಟ್ಟು 13,740 ಮನೆಗಳಲ್ಲಿ ಐಷಾರಾಮಿ ಮನೆಗಳ ಪಾಲು ಕೇವಲ ಶೇ.4ರಷ್ಟಿತ್ತು.

2024ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು, ಮುಂಬೈ ಮಹಾನಗರ ಪ್ರದೇಶ, ಚೆನ್ನೈ, ಪುಣೆ ಮತ್ತು ಹೈದರಾಬಾದ್ಗಳಲ್ಲಿ ಮಧ್ಯಮ ಶ್ರೇಣಿ ಮತ್ತು ಪ್ರೀಮಿಯಂ ವಿಭಾಗಗಳಲ್ಲಿ (40 ಲಕ್ಷ ರೂ.ಗಳಿಂದ 1.5 ಕೋಟಿ ರೂ.ವರೆಗಿನ ಬೆಲೆಗಳ ಮನೆಗಳು) ಗರಿಷ್ಠ ಮಾರಾಟ ದಾಖಲಾಗಿದೆ.

                 ಅಗ್ಗದ ಬೆಲೆಗಳ ಮನೆಗಳ ವಿಷಯಕ್ಕೆ ಬಂದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರಾಟಗೊಂಡ ಒಟ್ಟು ಹೊಸಮನೆಗಳಲ್ಲಿ ಅವುಗಳ ಪಾಲು ಶೇ.18ಕ್ಕೆ ಕುಸಿದಿದೆ ಎನ್ನುವುದನ್ನು ದತ್ತಾಂಶಗಳು ಸೂಚಿಸಿವೆ. ವರದಿಯ ಪ್ರಕಾರ ಐದು ವರ್ಷಗಳ ಹಿಂದೆ, 2019ರ ಮೊದಲ ತ್ರೈಮಾಸಿಕದಲ್ಲಿ ಅವುಗಳ ಪಾಲು ಶೇ.40ರಷ್ಟಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries