ಬದಿಯಡ್ಕ: ನೀರ್ಚಾಲು ಸಮೀಪದ ಕನ್ನೆಪ್ಪಾಡಿಯಲ್ಲಿರುವ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಪುನರ್ ಪ್ರತಿμÁ್ಠ ಮಹೋತ್ಸವತಂತ್ರಿವರ್ಯರಾದ ಬ್ರಹ್ಮಶ್ರೀ ಮಹೇಶ್ ಶಾಂತಿ ಹೆಜಮಾಡಿ ಅವರ ನೇತೃತ್ವದಲ್ಲಿ ಶುಕ್ರವಾರ ಜರಗಿತು.
ನೂರಾರು ಭಕ್ತರು ಪಾಲ್ಗೊಂಡಿದ್ದರು. ಪೂರ್ವ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿರುವ ಮೂಲ ಮೈಸಂದಾಯ,ಶ್ರೀ ಆಂಜನೇಯ ಸ್ವಾಮಿ,ಭದ್ರಕ್ಕಾಳಿ ಹಾಗೂ ಪರಿವಾರ ದೈವಗಳ ಪ್ರತಿμÉ್ಠಯನ್ನು ನೂತನ ಚಾವಡಿಯಲ್ಲಿ ಪ್ರತಿμÁ್ಢಪಿಸಲಾಯಿತು. ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ದ ಕೊಡ್ಯಮೆ ಅರಮನೆಗೊಳಪಟ್ಟ ದಂಡಿನ ಮೊಗೇರ (ಸೈನಾಧಿಕಾರಿಯಾಗಿದ್ದ) ಮುದ್ದ ಮೊಗೇರ ಅಂತಲ ಮೊಗೇರ ಚಾವಡಿ(ಕೊಟ್ಯ)ಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಪರಂಪರೆಯ ದೈವ ದೇವಾದಿಗಳು ಇದಾಗಿದ್ದವು ಇದು ಊರಿಗೆ ಕ್ಷೇಮ ದಯಪಾಲಿಸುವ ಕಾರಣೀಕ ಶಕ್ತಿಗಳೆಂದು ಕಂಡು ಬಂದಂತೆ ತದ ನಂತರದಲ್ಲಿ ಊರವರೆಲ್ಲಾ ಸೇರಿಕೊಂಡು ಎಡನೀರು ಮಠಾಧೀಶರ ಹಾಗೂ ಕೊಂಡೆವೂರು ಶ್ರೀಗಳ ಮಾರ್ಗದರ್ಶನದಲ್ಲಿ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿ ಅಭಿವೃದ್ಧಿ ಸಮಿತಿ ರಚಿಸಿ ನೂತನ ಸಾನಿಧ್ಯ ನಿರ್ಮಾಣ ನಡೆಸಿ ಇದೀಗ ಬ್ರಹ್ಮಕಲಶೋತ್ಸವ ಕಾರ್ಯ ನಡೆಸಲಾಗಿದೆ. ಸಂಜೆ ಗುಳಿಗ ಕೋಲ, ಮೈಸಂದಾಯ ದೈವದ ಕೋಲ,ಧಾರ್ಮಿಕ ಸಭೆ, ರಾತ್ರಿ ಕುಪ್ಪೆ ಪಂಜುರ್ಲಿ ದೈವದ ಕೋಲ, ಕೊರಗ ತನಿಯ ಕಲ್ಲುರ್ಟಿ ದೈವ ಕೋಲ ಜರಗಿತು.