ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕ ಮತ್ತು ಮೆಚೆರ್ಂಟ್ಸ್ ವೆಲ್ಫೇರ್ ಸೊಸೈಟಿಯ ದೈವಾರ್ಷಿಕ ಮಹಾಸಭೆ ಗುರುವಾರ ನೀರ್ಚಾಲು ವ್ಯಾಪಾರಿ ಭವನದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಧ್ವಜಾರೋಹಣ ನೆರವೇರಸೀದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶೆರೀಫ್ ಉದ್ಘಾಟಿಸಿದರು. ಘಟಕದÀ ಅಧ್ಯಕ್ಷ ಸುಬ್ರಹ್ಮಣ್ಯ ಭÀಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ, ಬದಿಯಡ್ಕ ಘಟಕದ ಅಧ್ಯಕ್ಷ ಮಹಮ್ಮದ್ ಕುಂಜಾರು ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಾಪಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 2024-26 ನೇ ವರ್ಷಕ್ಕಿರುವ ನೂತನ ಸಮಿತಿಯನ್ನು ಈ ಸಂದರ್ಭ ಆಯ್ಕೆಮಾಡಲಾಯಿತು. ರವಿ ಖಂಡಿಗೆ ಸ್ವಾಗತಿಸಿ, ಸತ್ಯಶಂಕರ ಭಟ್ ವಂದಿಸಿದರು.