ಕಾಸರಗೋಡು: ಮಳೆಗಾಲದಲ್ಲಿ ಜಾನುವಾರುಗಳ ನಿರ್ವಹಣೆಗೆ ಬಗ್ಗೆ ಹೆಚ್ಚಿನ ಗಮನಹರಿಸುವುದರ ಜತೆಗೆ ಹಟ್ಟಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಕಾಪಾಡುವುದು ಮುಂಗಾರು ನಿರ್ವಹಣೆಗೆ ಪ್ರಮುಖವಾಗಿದೆ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಹಟ್ಟಿ ಛಾವಣಿಯಲ್ಲಿ ಸೋರಿಕೆ ಇದ್ದರೆ, ಅದರ ದುರಸ್ತಿ ನಡೆಸಿ, ನೆಲದಲ್ಲಿ ಹೊಂಡ ಮತ್ತು ಬಿರುಕುಗಳನ್ನು ಕಾಂಕ್ರೀಟ್ನಿಂದ ತುಂಬಿಸಬೇಕು. ದುಸ್ಥಿತಿಯಲ್ಲಿರುವ ಹಟ್ಟಿಗಳ ಸಮರ್ಪಕ ದುರಸ್ತಿನಡೆಸುವುದು ಮತ್ತು ಭದ್ರತೆಯನ್ನು ಖಚಿತಪಡಿಸುವುದು ಅನಿವಾರ್ಯ. ವಿಪತ್ತು ತಪ್ಪಿಸಲು ಹಟ್ಟಿಯ ಕಡೆಗೆ ವಾಲಿರುವ ಮರಗಳು ಮತ್ತು ರೆಂಬೆಗಳನ್ನು ಕತ್ತರಿಸಬೇಕು. ಹಟ್ಟಿಯ ಆಸುಪಾಸು ಬ್ಲೀಚಿಂಗ್ ಪೌಡರ್ ಅಥವಾ ಸುಣ್ಣವನ್ನು ಚಿಮುಕಿಸುವುದು ಮತ್ತು ಎರಡರಿಂದ ಮೂರು ಗಂಟೆಗಳ ನಂತರ ತೊಳೆಯುವುದರಿಂದ ಕೊಟ್ಟಿಗೆಯಲ್ಲಿ ಮತ್ತು ಸುತ್ತಲೂ ಜಾರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೆಡ್‍ನೊಳಗೆ ಮಳೆನೀರು ಜಿನುಗುವ ಸಾಧ್ಯತೆಯಿದ್ದರೆ ಛಾವಣಿಯ ಇಳಿಜಾರನ್ನು ಒಂದು ಅಥವಾ ಎರಡು ಅಡಿ ವಿಸ್ತರಿಸಬೇಕು. ದನದ ಕೊಟ್ಟಿಗೆ ಹಾಗೂ ಸುತ್ತಮುತ್ತ ನೀರು ನಿಲ್ಲುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯಿರುವುದರಿಂದ ನೀರು ನಿಲ್ಲದಂತೆ ತಡೆಗಟ್ಟಲು ವಿಶೇಷ ಕಾಳಜಿ ವಹಿಸಬೇಕು. ಮಳೆಗಾಲದಲ್ಲಿ ಹಟ್ಟಿ ಸುತ್ತ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೆ ಸೇರಿದಂತೆ ಸೊಳ್ಳೆಗಳಿಂದ ಬರುವ ರೋಗಗಳು ವ್ಯಪಿಸುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಮುಂಜಾನೆ ಹಾಲುಕರೆಯುವುದಕ್ಕಾಗಿ ಹಟ್ಟಿಗೆ ತೆರಳುವ ರೈತರು ಸೊಳ್ಳೆಗಳ ಕಾಟಕ್ಕೆ ತುತ್ತಾಗಿ ರೋಗ ತಗಲುವ ಸಾಧ್ಯತೆ ಹೆಚ್ಚಾಗುತ್ತಿದೆ. ಇದು ಹೈನುಗಾರರಿಗೆ ಮಾತ್ರವಲ್ಲ ಜಾನುವಾರುಗಳಿಗೂ ರೋಗ ಹರಡುವ ಸಾಧ್ಯತೆಯಿದೆ. ಹಟ್ಟಿ ಸುತ್ತ ಸೊಳ್ಳೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ತಿಳಿಸಲಾಗಿದೆ.
ಮಳೆ, ತಣ್ಣನೆಯ ಗಾಳಿ ಮತ್ತು ಗುಡುಗು ಸಹಿತ ಮಳೆಗಾಲದಲ್ಲಿ ಹಸುಗಳನ್ನು ತೆರೆದ ಪ್ರದೇಶಗಳಲ್ಲಿ ಮೇಯಿಸುವುದನ್ನು ತಪ್ಪಿಸಬೇಕು. ಮಳೆಯಿಂದಾಗಿ ಜಾನುವಾರುಗಳು ತುರ್ತು ಪರಿಸ್ಥಿತಿ ಉಂಟಾದರೆ ಸಮೀಪದ ಪಶು ಆಸ್ಪತ್ರೆಗೆ ಮಾಹಿತಿ ನೀಡುವಂತೆ ಜಿಲ್ಲಾ ಮೃಗ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.