HEALTH TIPS

ಕಾಸರಗೋಡಿನಲ್ಲಿ ವಿಕಲಚೇತನ, ವೃದ್ಧ ಮತದಾರರಿಗೆ ನೆರವಾದ 'ಪಿಕ್ ಏಂಡ್ ಡ್ರಾಪ್' ಯೋಜನೆ

            ಕಾಸರಗೋಡು: ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ವಿಕಲಚೇತನರು ಮತ್ತು ವಯೋವೃದ್ಧರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವಲ್ಲಿ ಕಾಸರಗೋಡು ಜಿಲ್ಲೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ.  ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅಂಗವಿಕಲರು ಮತ್ತು ದೃಷ್ಟಿ ವಿಕಲಚೇತನರು ಹಾಗೂ ಅಂಗವಿಕಲ ವೃದ್ಧರನ್ನು ಮತಗಟ್ಟೆಗೆ ಕರೆತರಲು  'ಪಿಕ್ ಏಂಡ್ ಡ್ರಾಪ್' ವ್ಯವಸ್ಥೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಿಲ್ಲೆಯ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಪ್ರಶಂಸೆಗೂ ಪಾತ್ರರಾಗಿದ್ದಾರೆ.

           ವಿಕಲಚೇತನರು ಮತ್ತು ಹಿರಿಯರ ಭಾಗವಹಿಸುವಿಕೆಯನ್ನು ಬಲಪಡಿಸಲು ಚುನಾವಣಾ ಆಯೋಗವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿತ್ತು.  ವಿಕಲಚೇತನ ಮತದಾರರು, 85 ವರ್ಷ ಮೇಲ್ಪಟ್ಟವರು ಮತ್ತು ಸೀಮಿತ ಚಲನಶೀಲತೆ ಮತ್ತು ದೃಷ್ಟಿ ಹೊಂದಿರುವ ವಿಕಲಚೇತನರು ಎಂದು ಗುರುತಿಸಲಾದ ವ್ಯಕ್ತಿಗಳಿಗೆ ಮನೆಯಲ್ಲಿಯೇ ಮತದಾನ ಮಾಡಲು ಮನೆ ಮತದಾನದ ಸೌಲಭ್ಯ ಏರ್ಪಡಿಸಲಾಗಿತ್ತು. ಅಂಗವಿಕಲ ವೃದ್ಧರನ್ನು ಮತಗಟ್ಟೆಗಳಿಗೆ ಕರೆತರುವ ಪಿಕ್ ಅಂಡ್ ಡ್ರಾಪ್ ವ್ಯವಸ್ಥೆಯು ಎರಡು ಪ್ರಮುಖ ಯೋಜನೆಗಳಾಗಿವೆ. ದೇಶಾದ್ಯಂತ ಏಕರೂಪದ ರೀತಿಯಲ್ಲಿ ಮನೆ ಮತದಾನವನ್ನು ಆಯೋಜಿಸಲಾಗಿದ್ದರೂ, ಪಿಕ್ ಅಂಡ್ ಡ್ರಾಪ್ ವ್ಯವಸ್ಥೆ ಜಿಲ್ಲೆಯಲ್ಲಿ ಹೆಚ್ಚು ಕಾರ್ಯಕ್ಷಮತೆ ಸಾಧಿಸಿತ್ತು.    ಜಿಲ್ಲೆಯ 38 ಗ್ರಾಮ ಪಂಚಾಯಿತಿ ಹಾಗೂ 3 ನಗರಸಭಾ ಪ್ರದೇಶದಲ್ಲಿ ಪಾಲಿಯೇಟಿವ್ ಕೇರ್ ದಾದಿಯರ ನೇತೃತ್ವದಲ್ಲಿ  ಪಾಲ್ಯೇಟಿವ್ ಕೇರ್  ಘಟಕಗಳನ್ನು ಕೇಂದ್ರೀಕರಿಸಿ ಯೋಜನೆ ಜಾರಿಗೊಳಿಸಲಾಗಿತ್ತು. ಪಾಲಿಯೇಟಿವ್ ಕೇರ್ ಘಟಕಗಳಲ್ಲಿ ವಾಹನಗಳು ಸಾಕಷ್ಟಿಲ್ಲದ ಕಡೆಗೆ ಬಡ್ಸ್ ಶಾಲೆಗಳಲ್ಲಿನ ವಾಹನಗಳನ್ನು ಈ ಉದ್ದೇಶಕ್ಕಾಗಿ ಸಜ್ಜುಗೊಳಿಸಲಾಗಿತ್ತು.

           ಪಾಲಿಯೇಟಿವ್ ಕೇರ್ ದಾದಿಯರ ನೇತೃತ್ವದಲ್ಲಿ ಜಿಲ್ಲೆಯ 38 ಗ್ರಾಮ ಪಂಚಾಯಿತಿಗಳು ಮತ್ತು 3 ಪುನಗಸಭೆಗಳಲ್ಲಿ ಪಾಲಿಯೇಟಿವ್ ಕೇರ್ ಆರೈಕೆ ಘಟಕಗಳು ಕೇಂದ್ರೀಕೃತವಾಗಿವೆ.     

            ಈ ವಿನೂತನ ಪ್ರಯೋಗಕ್ಕೆ ಅಂಗವಿಕಲರ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ ರಾಜ್ ಅವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ ಇಲಾಖೆಯ ನೌಕರರನ್ನು ಬಳಸಿಕೊಂಡು ಯಶಸ್ವಿಯಾಗಿ ಚಟುವಟಿಕೆ ನಿರ್ವಹಿಸಿದ್ದರು.   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries