ಪತ್ತನಂತಿಟ್ಟ: ವಿವಾಹ ಸಮಾರಂಭಕ್ಕೆ ಕುಡಿದು ಲೋಕ ಕಾಣದೆ ತೂರಾಡುತ್ತಾ ಬಂದ ವರನಿಂದ ಮೊಟಕುಗೊಂಡ ವಿವಾಹ ವಾರಗಳ ನಂತರ ನಿನ್ನೆ ನಡೆದಿದೆ. ಕೊಝಂಚೇರಿಯಲ್ಲಿ ಘಟನೆ ನಡೆದಿದೆ.
ತಡಿಯೂರಿನ ಯುವಕನ ವಿವಾಹ ನಮನಂನ ಯುವತಿಯೊಂದಿಗೆ ಬುಧವಾರ ನಡೆದಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ವರ ಮದುವೆಗೆಂದು ರಜೆ ಹಾಕಿ ಮನೆಗೆ ಬಂದಿದ್ದರು.
ಕಳೆದ ಏಪ್ರಿಲ್ 15 ರಂದು ಮದುವೆ ನಿಶ್ಚಯವಾಗಿತ್ತು, ಆದರೆ ವರನು ನಾಲ್ಕು ಕಾಲುಗಳ ಮೇಲೆ ಚರ್ಚ್ ತಲುಪಿದನು. ಮದುವೆ ನೆರವೇರಿಸಲು ಬಂದ ಧರ್ಮಗುರುಗಳ ಬಳಿಯೂ ಪರಾಕ್ರಮ ತೋರಿದನು. ಇದರೊಂದಿಗೆ ಯುವತಿ ಮದುವೆಯಿಂದ ಹಿಂದೆ ಸರಿದಳು.
ಮದುಮಗನ ‘ಪ್ರೀ ಶೋÀ’ ಅತಿರೇಕಕ್ಕೆ ಹೋದಾಗ ವಧು-ವರರ ಸಂಬಂಧಿಕರ ನಡುವೆ ವಾಗ್ವಾದ ನಡೆದಿತ್ತು. ಮದುವೆ ದಿರಿಸಿನಲ್ಲಿದ್ದ ವರನನ್ನು ಪೋಲೀಸರು ವಶಕ್ಕೆ ಪಡೆದಿದ್ದರು.
ಆದರೆ ಇದೀಗ ಮಧ್ಯವರ್ತಿಗಳು ಮಧ್ಯಸ್ಥಿಕೆ ವಹಿಸಿ ಮದುವೆಗೆ ಷರತ್ತುಗಳನ್ನು ಸಿದ್ಧಪಡಿಸಿ ವರನಿಗೆ ನಿತ್ಯ ಕುಡಿತದ ಚಟ ಇಲ್ಲ ಎಂದು ವಧುವಿನ ಮನೆಯವರಿಗೆ ತಿಳಿಯಪಡಿಸುವುದರೊಂದಿಗೆ ಇದೀಗ ಮೊನ್ನೆ ಬುಧವಾರ ವಿವಾಹ ಸಾಂಗವಾಗಿ ನೆರವೇರಿತು. ಮುಂದೇನು ಎಂಬುದನ್ನು ವಧು ನಿರ್ಧರಿಸುವಳು ಎಂದು ಮದುವೆಗೆ ಬಂದ ಅನೇಕರು ತಿಳಿಸಿದ್ದಾರೆ.