ಕಾಸರಗೋಡು: ಜಿಲ್ಲೆಯ ನಾನಾ ಕಡೆ ಬಿರುಸಿನ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಕುಂಬಳೆ ಸನಿಹದ ಬಂಬ್ರಾಣ ಅಂಡಿತ್ತಡ್ಕ ಅಣೆಕಟ್ಟು ಸನಿಹದ ನಿವಾಸಿ ಅಬ್ದುಲ್ ರಹಮಾನ್ ಕರಿಮೂಲೆ ಎಂಬವರ ಹೆಂಚು ಹಾಸಿನ ಮನೆ ಕುಸಿದು ನಾಶಗೊಂಡಿದೆ. ಶನಿವಾರ ರಾತ್ರಿ ಸುರಿದ ಮಳೆಗೆ ಮನೆಯ ಒಂದು ಪಾಶ್ರ್ವ ಕುಸಿಯುವ ಶಬ್ದ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಅಬ್ದುಲ್ ರಹಮಾನ್ ಹಾಗೂ ಇವರ ಪತ್ನಿ ಉಮ್ಮಾಲಿ ಹೊರಕ್ಕೆ ಧಾವಿಸಿರುವುದರಿಂದ ಜೀವಾಪಾಯದಿಂದ ಪಾರಾಗಿದ್ದರು.
ಬಿರುಸಿನ ಮಳೆಗೆ ಮೊಗ್ರಾಲಿನಲ್ಲಿ ಬಾವಿ ಕುಸಿದು ಮನೆಯ ಒಂದು ಪಾಶ್ರ್ವಕ್ಕೂ ಹಾನಿಯುಂಟಾಘಿದೆ. ಮೊಗ್ರಾಲ್ ಮಿಲಾದ್‍ನಗರ ನಿವಾಸಿ, ದೇಶೀಯ ವೇದಿ ಜತೆಕಾರ್ಯದರ್ಶಿ ಬಿ.ಎ ಮಹಮ್ಮದ್‍ಕುಞÂ ಮಾಲಿಕತ್ವದ ಮನೆ ಅಡುಗೆ ಕೊಠಡಿಗೆ ಅಂಚಿನಲ್ಲಿರುವ ಬಾವಿ ಕುಸಿದಿದೆ. ಇದರಿಂದ ಅಡುಗೆ ಕೊಠಡಿಯೂ ಹಾನಿಗೀಡಾಗಿದೆ.