HEALTH TIPS

ಲೋಕಸಭಾ ಚುನಾವಣೆ : ರಾಜಕೀಯ ಪಕ್ಷಗಳ ಸಂಖ್ಯೆ ಹೆಚ್ಚಳ: ಎಡಿಆರ್‌ ವರದಿ

 ವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 2009 ರಿಂದ 2024ರ ವರೆಗಿನ ಅವಧಿಯಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ ಶೇ 104 ರಷ್ಟು ಹೆಚ್ಚಳವಾಗಿದೆ ಎಂದು ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್‌) ವರದಿ ತಿಳಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಒಟ್ಟು 751 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 8,337 ಅಭ್ಯರ್ಥಿಗಳ ಪ್ರಮಾಣಪತ್ರವನ್ನು ಪರಿಶೀಲಿಸಿದ ಎಡಿಆರ್‌ ಈ ಮಾಹಿತಿ ಕಲೆಹಾಕಿದೆ. ರಾಷ್ಟ್ರೀಯ ಪಕ್ಷಗಳ 1,333 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಪ್ರಾದೇಶಿಕ ಪಕ್ಷಗಳ 532, ಇತರ ನೋಂದಾಯಿತ ಸಣ್ಣ ಪಕ್ಷಗಳ 2,580 ಅಭ್ಯರ್ಥಿಗಳು ಹಾಗೂ 3,915 ಸ್ವತಂತ್ರ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಶೇ 9.6 ಮಹಿಳಾ ಅಭ್ಯರ್ಥಿಗಳು: ಈ ಬಾರಿಯ ಚುನಾವಣೆಯಲ್ಲಿ ಒಟ್ಟು ಅಭ್ಯರ್ಥಿಗಳಲ್ಲಿ ಮಹಿಳಾ ಸ್ಪರ್ಧಿಗಳ ಪ್ರಮಾಣ ಶೇ 9.6 ಆಗಿದೆ ಎಂದು ಎಡಿಆರ್‌ ವರದಿ ತಿಳಿಸಿದೆ. 8,337 ಅಭ್ಯರ್ಥಿಗಳಲ್ಲಿ 797 ಮಹಿಳೆಯರು ಇದ್ದಾರೆ. 2009ರ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 7 ರಷ್ಟಿತ್ತು. 2014 ರಲ್ಲಿ ಶೇ 8 ಹಾಗೂ 2019 ರಲ್ಲಿ ಶೇ 9 ರಷ್ಟು ಮಹಿಳಾ ಸ್ಪರ್ಧಿಗಳು ಇದ್ದರು.

ರಾಷ್ಟ್ರೀಯ ಪಕ್ಷಗಳ 1,333 ಅಭ್ಯರ್ಥಿಗಳಲ್ಲಿ 443 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ 295 ಮಂದಿ ವಿರುದ್ಧ ಗಂಭೀರ ಅಪರಾಧ ಪ್ರಕರಗಳು ಇವೆ. ಪ್ರಾದೇಶಿಕ ಪಕ್ಷಗಳ 532 ಅಭ್ಯರ್ಥಿಗಳಲ್ಲಿ 249 ಮಂದಿ ಮೇಲೆ ಅಪರಾಧ ಪ್ರಕರಣಗಳು ಇವೆ ಎಂದು ವರದಿ ತಿಳಿಸಿದೆ.

ರಾಜಕೀಯ ಪಕ್ಷಗಳು

ಲೋಕಸಭಾ ಚುನಾವಣೆ;ಕಣದಲ್ಲಿದ್ದ ಪಕ್ಷಗಳು

2009;368

2014;464

2019;677

2024;751

ಮಹಿಳಾ ಅಭ್ಯರ್ಥಿಗಳ ವಿವರ

ಲೋಕಸಭಾ ಚುನಾವಣೆ;ಮಹಿಳಾ ಅಭ್ಯರ್ಥಿಗಳು

2009;556

2014;640

2019;716

2024;797


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries