ಬದಿಯಡ್ಕ: ಎಡನೀರು ಚಾಪಾಡಿ ಶ್ರೀ ಶಾರದಾ ಮೂಕಾಂಬಿಕಾ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ ತಂತ್ರಿವರ್ಯ ಬ್ರಹ್ಮಶ್ರೀ ರಾಮ ಭಟ್ ನೀರ್ಚಾಲು ಅವರ ನೇತೃತ್ವದಲ್ಲಿ ಜರಗಿತು.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ನಡೆ ತೆರೆದು, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಸಂಜೆ ದೀಪರಾಧನೆ, ರಾತ್ರಿ ಮಹಾಪೂಜೆ, ಮಂಗಳಾಚರಣೆ, ಪ್ರಸಾದ ವಿತರಣೆ ನಡೆಯಿತು.