ಕೊಯಮತ್ತೂರು: ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ರೈಲ್ವೇ ಸಚಿವಾಲಯವು ಕೊಯಮತ್ತೂರು-ಮಂಗಳೂರು ಮಾರ್ಗದಲ್ಲಿ ಮೇ 18 ರಿಂದ ಜೂನ್ 29 ರವರೆಗೆ ವಿಶೇಷ ಸೇವೆಗಳಿಗೆ ಅನುಮತಿ ನೀಡಿದೆ.
ಶನಿವಾರದಂದು ವಿಶೇಷ ಸೇವೆ ಇರುತ್ತದೆ. ರೈಲು ಸಂಖ್ಯೆ 06042 ಕೊಯಮತ್ತೂರಿನಿಂದ ರಾತ್ರಿ 10.15 ಕ್ಕೆ ಸೇವೆಯನ್ನು ಪ್ರಾರಂಭಿಸುತ್ತದೆ.
ಮರುದಿನ ಬೆಳಗ್ಗೆ 6.55ಕ್ಕೆ ಮಂಗಳೂರು ತಲುಪಲಿದೆ. ರಿಟರ್ನ್ ರೈಲು ಸಂಖ್ಯೆ 06041 ಮಂಗಳೂರು ಜಂಕ್ಷನ್‍ನಿಂದ ಬೆಳಗ್ಗೆ 9.30ಕ್ಕೆ ಹೊರಟು ಸಂಜೆ 6.15ಕ್ಕೆ ಕೊಯಮತ್ತೂರು ತಲುಪುತ್ತದೆ. ಪೆÇತನೂರ್, ಪಾಲಕ್ಕಾಡ್, ಒಟ್ಟಪಾಲಂ, ಶೋರ್ನೂರು, ತಿರೂರ್, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು ಮತ್ತು ಕಾಸರಗೋಡುಗಳಲ್ಲಿ ನಿಲುಗಡೆಗಳನ್ನು ಮಂಜೂರು ಮಾಡಲಾಗಿದೆ.