ಕಾಸರಗೋಡು: ಉದುಮ ಹೈಯರ್ ಸೆಕೆಂಡರಿ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಎಸ್ಸೆಸೆಲ್ಸಿ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಗೆ ಮೇ 26ರಂದು ಸನ್ಮಾನ ಸಮಾರಂಭ ಏರ್ಪಡಿಸಲು ಹೈಯರ್ ಸೆಕೆಂಡರಿ ಅಲ್ಯುಮಿನಾ ಅಸೋಸಿಯೇಷನ್ ಸಭೆ ನಿರ್ಧರಿಸಿತು.
ಇದೇ ಸಂದರ್ಭ ಶಾಲೆಯ 60ಕ್ಕೂ ಹೆಚ್ಚು ತರಗತಿ ಕೊಠಡಿಗಳಿಗೆ ಗೋಡೆ ಗಡಿಯಾರ ನೀಡಲು ಹಾಗೂ ಶಿಥಿಲಗೊಂಡ ಬೆಂಚು, ಡೆಸ್ಕ್ ಗಳನ್ನು ಪ್ರವೇಶ ಮಹೋತ್ಸವಕ್ಕೂ ಮುನ್ನ ದುರಸ್ತಿಗೊಳಿಸಲು ಸಭೆ ತೀರ್ಮಾಣಿಸಿತು. ಶಾಲೆಯ ಎಲ್ಲಾ ಹಳೆಯ ವಿದ್ಯಾರ್ಥಿಗಳು ಅಲ್ಯುಮಿನಾ ಅಸೋಸಿಯೇಶನ್‍ನ ಸದಸ್ಯತ್ವ ವಿತರಣೆಯಲ್ಲಿ ಭಾಗವಹಿಸುವಂತೆ ಸಭೆ ವಿನಂತಿಸಿತು.
ಮುಜೀಬ್ ಮಾಙËಡ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ.ಉದಯಕುಮಾರ್, ಶರೀಫ್ ಎರೋಳ್, ಸಲಾವುದ್ದೀನ್, ಜಯಂತಿ ಅಶೋಕ್, ಅಶ್ರಫ್ ಯು.ಎ, ಟಿ.ವಿ. ರವೀಂದ್ರನ್ ಅಶ್ರಫ್ ತಳಕ್ಲಾಯಿ, ಪಿ.ಕೆ.ಪ್ರವಿ, ಪಿ.ಎ.ಅಬ್ದುಲ್ಲಾ, ಸುಕುಮಾರನ್ ಪಳ್ಳಂ, ಅಶ್ರಫ್ ಮಾಙËಡ್, ಎಂ.ಬಿ. ಶಾಫಿ, ಆಬಿದ್ ನಾಲಾಂವಾದುಕಲ್, ಮುಹಮ್ಮದ್‍ಕುಞÂ ಈಚಿಲಿಂಗಾಲ್, ಮೊಯ್ದೀನ್‍ಕುಞÂ, ವೇಣುಗೋಪಾಲನ್ ಟಿ.ವಿ., ಅಬ್ದುಲ್ ಸಲಾಂ, ಅಬ್ದುಲ್ ರಹ್ಮಾನ್ ಜಾಫರ್, ಖೈರುನ್ನೀಸಾ, ಜಮೀಲಾ ಉಬೈದ್, ಬೀಫಾತಿಮಾ ಉಪಸ್ಥಿತರಿದ್ದರು.