ಬದಿಯಡ್ಕ: ನೀರ್ಚಾಲು ಕನ್ನೆಪ್ಪಾಡಿಯ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಒಂದು ಲಕ್ಷ ರೂ. ಧನಸಹಾಯನ್ನು ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಅವರು ಚಾವಡಿ ಸನ್ನಿಧಿಗೆ ಆಗಮಿಸಿ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು. ಚಾವಡಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮದನ ಎಂ, ಕೆ.ಕೆ.ಸ್ವಾಮಿಕೃಪಾ, ಪ್ರಧಾನ ಕರ್ಮಿ ಶಂಕರ ಸ್ವಾಮಿಕೃಪಾ, ರಮೇಶ್ ಕೆ., ಶಂಕರ ಬದಿಯಡ್ಕ ಉಪಸ್ಥಿತರಿದ್ದರು.