ಕಾಸರಗೋಡು: ಶೈಕ್ಷಣಿಕ ವರ್ಷಾರಂಭಕ್ಕೆ ಮೊದಲು ಎಲ್ಲಾ ಶಾಲಾ ವಾಹನಗಳ ತಪಾಸಣೆ ನಡೆಸಿ ಫಿಟ್‍ನೆಸ್ ಸರ್ಟಿಫಿಕೇಟ್ ನೀಡುವ ಕಾರ್ಯಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆ ಬುಧವಾರ ಚಾಲನೆ ನೀಡಿದೆ. ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕು ವ್ಯಾಪ್ತಿಯ ಶಾಲಾ ವಾಹನಗಳನ್ನು ಜಿಲ್ಲೆಯ ಎರಡು ಕೇಂದ್ರಗಳಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ಕಾಸರಗೋಡು ವ್ಯಾಪ್ತಿಯ ವಾಹನಗಳನ್ನು ಕಾಸರಗೋಡು ನಗರಸಭಾ ಸ್ಟೇಡಿಯಂ ವಠಾರದಲ್ಲಿ ತಪಾಸಣೆ ನಡೆಸಲಾಯಿತು. ಮಂಜೇಶ್ವರ ತಾಲೂಕು ವ್ಯಾಪ್ತಿಯ ವಾಹನಗಳನ್ನು ಉಪ್ಪಳ ಎಜೆಐ ಶಾಲಾ ಮೈದಾನದಲ್ಲಿ ತಪಾಸಣೆಗೊಳಪಡಿಸಲಾಯಿತು. ಶೈಕ್ಷಣಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಶಾಲಾ ವಗಾಹನಗಳ ಫಿಟ್‍ನೆಸ್ ತಪಾಸಣೆ ನಡೆಸಲಾಯಿತು. ಮುಖ್ಯವಾಗಿ ವಾಹನಗಳ ಚಕ್ರ, ಬ್ರೇಕ್,ಇಂಜಿನ್, ವೈಪರ್, ವಾಹನದ ಬಾಗಿಲುಗಳ ದೃಢತೆ ಬಗ್ಗೆ ತಪಾಸಣೆ ನಡೆಸಲಾಯಿತು. ಕಾಸರಗೋಡಿನಲ್ಲಿ ನಡೆದ ತಪಾಸಣೆಗೆ ವಾಹನ ನಿರೀಕ್ಷಕ ಪಿ.ಶ್ರೀನಿವಾಸನ್, ಕೆ.ವಿ.ಅರುಣ್ ಕುಮಾರ್ ಮತ್ತು ಕೆ.ವಿ.ಗಣೇಶನ್ ನೇತೃತ್ವ ನೀಡಿದರು.