ಕೋಝಿಕ್ಕೋಡ್: ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಬದಿಯಡ್ಕ ಚೆನ್ನಡ್ಕ ನಿವಾಸಿ ಮಹಮ್ಮದ್ ಸುಹೈಲ್ ಎಂಬಾತನನ್ನು ಕಾಸರಗೋಡಿನ ವಿಶೇಷ ಪೊಲೀಸ್ ತಂಡವೊಂದು ಕೋಯಿಕ್ಕೋಡ್ ಕಣಿಚ್ಚಿರ ಪೊಲೀಸರ ಸಹಕಾರದಿಂದ ಬಂಧಿಸಿದೆ.
ಕೋಯಿಕ್ಕೋಡ್ ವಾಕೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತನನ್ನು ಬಂಧಿಸಿ ಕಾಸರಗೋಡಿಗೆ ಕರೆತರಲಾಗಿದೆ. ಕಾಸರಗೋಡಿನ ವಿವಿಧ ಠಾಣೆಗಳಲ್ಲಾಗಿ ಈತನ ವಿರುದ್ಧ 16ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.