HEALTH TIPS

ಕೇರಳ ಶಾಲೆಗಳಲ್ಲಿ ಎ.ಐ. ಪಾಠ

 ತಿರುವನಂತಪುರ: ಶಿಕ್ಷಣದ ಆಧುನೀಕರಣಕ್ಕೆ ಮಹತ್ವದ ಹೆಜ್ಜೆ ಇರಿಸಿರುವ ಕೇರಳವು, ಶಾಲಾ ಪಠ್ಯಪುಸ್ತಕಗಳಲ್ಲಿ ಕೃತಕ ಬುದ್ಧಿಮತ್ತೆಯ (ಎ.ಐ) ವಿಷಯ ಸೇರ್ಪಡೆಗೊಳಿಸಲು ನಿರ್ಧರಿಸಿದೆ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಪಠ್ಯಕ್ರಮದ ಭಾಗವಾಗಿ ಎ.ಐ.

ಕಲಿಕಾ ಮಾದರಿಯನ್ನು ಅಳವಡಿಸುವ ಯೋಜನೆಯನ್ನು ರಾಜ್ಯ ಸರ್ಕಾರವು ಅನಾವರಣಗೊಳಿಸಿದೆ.

ಸರ್ಕಾರದ ಈ ನಡೆಯಿಂದಾಗಿ ರಾಜ್ಯದ ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಲಿದೆ. ಅವರಿಗೆ ಬರಲಿರುವ ಶೈಕ್ಷಣಿಕ ವರ್ಷದಲ್ಲಿ ಎ.ಐ. ಕುರಿತು ಕಲಿಯಲು ಸಾಧ್ಯವಾಗಲಿದೆ ಎಂದು ಕೇರಳ ಶೈಕ್ಷಣಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ (ಕೈಟ್) ಸಂಸ್ಥೆಯ ಪ್ರಕಟಣೆ ಹೇಳಿದೆ.

ಮನುಷ್ಯನ ಮುಖಭಾವವನ್ನು ಗುರುತಿಸುವ ಸಾಮರ್ಥ್ಯದ ಎ.ಐ. ಪ್ರೋಗ್ರಾಮ್‌ ರಚಿಸುವ ಚಟುವಟಿಕೆಯು 'ಕಂಪ್ಯೂಟರ್ ವಿಷನ್' ಹೆಸರಿನ ಅಧ್ಯಾಯದಲ್ಲಿ ಇರಲಿದೆ ಎಂದು ಕೈಟ್‌ ಸಿಇಒ ಅನ್ವರ್ ಸಾದತ್ ತಿಳಿಸಿದ್ದಾರೆ.

'ಮನುಷ್ಯದ ಮುಖದಲ್ಲಿ ವ್ಯಕ್ತವಾಗುವ ಗರಿಷ್ಠ ಏಳು ಭಾವನೆಗಳನ್ನು ಗುರುತಿಸುವ ಸಾಮರ್ಥ್ಯವನ್ನು ಈ ಪ್ರೋಗ್ರಾಮ್‌ ಹೊಂದಿರಲಿದೆ. ತರಗತಿಯೊಂದರ ಎಲ್ಲ ವಿದ್ಯಾರ್ಥಿಗಳು ಎ.ಐ. ಬಗ್ಗೆ ಕಲಿಯುವ ಸಮಾನ ಅವಕಾಶವು ಲಭ್ಯವಾಗುತ್ತಿರುವುದು ದೇಶದಲ್ಲಿ ಇದೇ ಮೊದಲು' ಎಂದು ಅವರು ಹೇಳಿದ್ದಾರೆ.

ಹೊಸ ಶೈಕ್ಷಣಿಕ ವರ್ಷವು ಜೂನ್‌ 3ರಿಂದ ಆರಂಭವಾಗಲಿದೆ. ಮಲಯಾಳ, ಇಂಗ್ಲಿಷ್, ತಮಿಳು ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವ 1, 3, 5 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಐಸಿಟಿ ಪಠ್ಯಪುಸ್ತಕ ಇರಲಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಆಲೋಚನೆ, ವಿಶ್ಲೇಷಣಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸುವುದಕ್ಕೆ ಪಠ್ಯಕ್ರಮ ಚೌಕಟ್ಟು ಒತ್ತು ನೀಡುತ್ತದೆ.

ಎ.ಐ. ವಿಚಾರವಾಗಿ 80 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸವನ್ನು ಕೈಟ್‌ ಆರಂಭಿಸಿದೆ. ಇದುವರೆಗೆ 20,120 ಶಿಕ್ಷಕರು ಈ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries