ಕುಂಬಳೆ: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ಒಂದನೇ ತರಗತಿಗೆ ಹೊಸತಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಕೊಟ್ಟೂಡಲ್ ಸಮಾರಂಭ ಉದ್ಘಾಟಿಸಿದರು. ಮಾತ್ರ ಪಿಟಿಎ ಅಧ್ಯಕ್ಷೆ ಅನಿತಾ, ಶಾಲಾ ಮುಖ್ಯ ಶಿಕ್ಷಕಿ ಕುಮಾರಿ ವತ್ಸಲ, ಸಲಾವುದ್ದೀನ್ ಮಾಸ್ಟರ್, ಸಯೀದ್ ಮಾಸ್ಟರ್, ರಸೀನ ಟೀಚರ್, ಪ್ರೇಮ ಟೀಚರ್ ಹಾಗೂ ಮಕ್ಕಳ ಹೆತ್ತವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.