ತಿರುವನಂತಪುರಂ: ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೇರಳ ಲೋಕಸೇವಾ ಆಯೋಗದ ಅಧಿಕೃತ ಲಾಂಛನ ಮತ್ತು ಆಯೋಗದ ಹೆಸರು ಅಥವಾ ಅಂತಹುದೇ ಹೆಸರುಗಳನ್ನು ಬಳಸಿಕೊಂಡು ವಾಟ್ಸಾಪ್ ಗುಂಪುಗಳು, ಟೆಲಿಗ್ರಾಂ ಚಾನೆಲ್ಗಳು, ಫೇಸ್ಬುಕ್ ಪುಟಗಳು ಮತ್ತು ಯೂಟ್ಯೂಬ್ ಚಾನೆಲ್ಗಳನ್ನು ನಡೆಸುವುದು ಅಪರಾಧವಾಗಿದೆ ಎಂದು ಪಿಎಸ್ಸಿ ಹೇಳಿದೆ.
ಅಭ್ಯರ್ಥಿಗಳು ಇವುಗಳನ್ನು ಆಯೋಗದ ಅಧಿಕೃತ ಸಾಮಾಜಿಕ ಮಾಧ್ಯಮ ಚಾನಲ್ಗಳು ಎಂದು ತಪ್ಪಾಗಿ ಗ್ರಹಿಸುವ ಸಾಧ್ಯತೆಯಿದೆ. ಅದೇ ರೀತಿ ಪಿಎಸ್ ಸಿ ಅನುಮೋದಿತ ಕೋರ್ಸ್ ಗಳೆಂದು ಸುಳ್ಳು ಜಾಹೀರಾತು ನೀಡಿ ವಿವಿಧ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಪಿ.ಎಸ್.ಸಿ ಮಾನ್ಯತೆ ಪಡೆದಿದೆ ಎಂದು ಜಾಹೀರಾತು ನೀಡುವ ಮೂಲಕ ಕೋರ್ಸ್ಗಳನ್ನು ನಡೆಸುವುದು ಸಹ ಅಪರಾಧ ಎಂದು ಪಿಎಸ್ಸಿ ಹೇಳಿದೆ.