ಕೊಚ್ಚಿ: ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಪ್ರಾರ್ಥನಾ ಸ್ಥಳಗಳನ್ನು ಕೆಡವಲು ಹೈಕೋರ್ಟ್ ಆದೇಶ ನೀಡಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ಅನುಮತಿ ಇಲ್ಲದೇ ನಿರ್ಮಿಸಿರುವ ಆರಾಧನಾಲಯಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ಲಾಂಟೇಶನ್ ಕಾರ್ಪೋರೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿವಿ ಕುಂಞÂ್ಞ ಕೃಷ್ಣನ್ ಈ ಆದೇಶ ನೀಡಿದ್ದಾರೆ.
ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಯಾವುದೇ ಧರ್ಮದವರ ಆರಾಧನಾ ಸ್ಥಳವನ್ನು ನಿರ್ಮಿಸುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ. ಅಕ್ರಮ ಪ್ರಾರ್ಥನಾ ಮಂದಿರಗಳನ್ನು ಕೆಡವಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುತ್ತದೆ ಎಂಬ ಸರ್ಕಾರದ ನಿಲುವು ಒಪ್ಪಲಾಗದು. ಯಾವುದೇ ಧರ್ಮದ ಆರಾಧನಾ ಸ್ಥಳವನ್ನು ನಿರ್ಮಿಸುವುದು ಕಾನೂನುಬಾಹಿರ. ನ್ಯಾಯಾಲಯದ ಆದೇಶದ ಪ್ರಕಾರ, ಅಂತಹ ಕಟ್ಟಡಗಳನ್ನು ಪತ್ತೆ ಮಾಡಲು ಮುಖ್ಯ ಕಾರ್ಯದರ್ಶಿ ಆದೇಶ ನೀಡಬೇಕು, ಜಿಲ್ಲಾಧಿಕಾರಿಗಳು ಆರು ತಿಂಗಳೊಳಗೆ ಉತ್ತರ ವರದಿ ಸಲ್ಲಿಸಬೇಕು, ಒಂದು ವರ್ಷದೊಳಗೆ ನೆಲಸಮ ಸೇರಿದಂತೆ ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಬೇಕು. ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡಬೇಕೆಂದೂ ಆದೇಶಿಸಲಾಗಿದೆ.
ಯಾವುದೇ ಧರ್ಮದವರು ಪೂಜೆಗಾಗಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲು ಅನುಮತಿ ನೀಡಬಾರದು ಮತ್ತು ಕಂಬ ಮತ್ತು ಮರಗ|ಳಲ್ಲಿ ದೇವರು ಇದ್ದಾನೆ ಎಂದು ನಂಬಬಾರದು ಎಂದು ನ್ಯಾಯಾಲಯ ಹೇಳಿದೆ.