ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವಿಕಾಸ ಶಿಬಿರವು ಸಂಘದ ಕಾರ್ಯಕರ್ತರಿಗೆ ರಾಷ್ಟ್ರೀಯ ಏಕಾತ್ಮತೆಯ ಅನುಭೂತಿ ನೀಡುತ್ತದೆ ಎಂದು ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖ್ ಪರಾಗ್ ಅಭ್ಯಂಕರ್ ಅಭಿಪ್ರಾಯಿಸಿದ್ದಾರೆ. ನಾಗಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಡಾ.

ಸಂಘದ ಕಾರ್ಯಗಳಲ್ಲಿ ಪ್ರಶಿಕ್ಷಣ ವರ್ಗ ಅತ್ಯಂತ ಮಹತ್ವದ್ದಾಗಿದೆ. ಈ ಕಾರಣದಿಂದಾಗಿಯೇ ಸಂಘ ಕಾರ್ಯವನ್ನು ವೃದ್ಧಿಸುವ ದೃಷ್ಟಿಯಿಂದ ಪ್ರಾಂತೀಯ ಸ್ಥಳಗಳಲ್ಲಿಯೂ ಪ್ರಶಿಕ್ಷಣ ವರ್ಗಗಳನ್ನು ನಡೆಸಲು ಪ್ರಾರಂಭಿಸಲಾಯಿತು. ಕೊರೋನಾ ಸಮಯದಲ್ಲಿ ಬಿಟ್ಟು ಪ್ರಶಿಕ್ಷಣ ವರ್ಗ ನಿರಂತರವಾಗಿ ನಡೆದುಕೊಂಡು ಬಂದಿದೆ. ಹಾಗೆಯೇ ಸಮಯಕ್ಕೆ ಅನುಗುಣವಾಗಿ ಪ್ರಶಿಕ್ಷಣ ವರ್ಗದ ಅವಧಿ ಮತ್ತು ಪಠ್ಯಕ್ರಮದಲ್ಲಿ ಬದಲಾವಣೆಗಳೂ ಆಗಿವೆ. ಕಾರ್ಯಕರ್ತರ ಚಿಂತನೆ ಹೇಗಿರಬೇಕು, ಅವರ ಮುಂದಿರುವ ಸವಾಲುಗಳು ಯಾವುವು ಎಂಬುದನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡರಾದ ಇಕ್ಬಾಲ್ ಸಿಂಗ್, ಡಾ.ಕೃಷ್ಣ ಗೋಪಾಲ್ ಮುಕುಂದ ಸಿ.ಆರ್, ರಾಮದತ್ತ್ ಚಕ್ರಧರ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಾದ್ಯಂತದಿಂದ 936 ಶಿಕ್ಷಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದು, ಕರ್ನಾಟಕದ 44 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ. ಮೇ 16 ರಿಂದ ಆರಂಭವಾಗಿರುವ ಶಿಬಿರವು ಜೂ.11ರವರೆಗೆ ನಡೆಯಲಿದೆ.