ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 25 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಲುಂಬಾಡುಗ್ ಜಲ ವಿದ್ಯುತ್ ಯೋಜನೆಯಲ್ಲಿ ಪರೀಕ್ಷಾ ಹಂತದಲ್ಲೇ ದೋಷ ಕಂಡುಬಂದಿದೆ. ಮೇ 10ರಂದು ಸ್ಥಾವರದ ಪೆನ್‌ಸ್ಟಾಕ್‌ನಲ್ಲಿ (ಜಲಚಕ್ರಕ್ಕೆ ನೀರು ಪಂಪ್ ಮಾಡುವ ಪೈಪ್) ಸೋರಿಕೆ ಕಂಡುಬಂದಿದೆ.
ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 25 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಲುಂಬಾಡುಗ್ ಜಲ ವಿದ್ಯುತ್ ಯೋಜನೆಯಲ್ಲಿ ಪರೀಕ್ಷಾ ಹಂತದಲ್ಲೇ ದೋಷ ಕಂಡುಬಂದಿದೆ. ಮೇ 10ರಂದು ಸ್ಥಾವರದ ಪೆನ್‌ಸ್ಟಾಕ್‌ನಲ್ಲಿ (ಜಲಚಕ್ರಕ್ಕೆ ನೀರು ಪಂಪ್ ಮಾಡುವ ಪೈಪ್) ಸೋರಿಕೆ ಕಂಡುಬಂದಿದೆ.
'ಹಿಮಧಾರಾ ಎನ್ವಿರಾನ್ಮೆಂಟ್ ರಿಸರ್ಚ್ ಆಯಂಡ್ ಕಲೆಕ್ಟಿವ್' ತಂಡದ ಮೂವರು ಸದಸ್ಯರು ಕಳೆದ ಶನಿವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಹಾನಿ ಕುರಿತು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಸ್ಥಾವರದ ಪೆನ್‌ಸ್ಟಾಕ್‌ನಿಂದ ಕೆಸರು ಮಿಶ್ರಿತ ನೀರು ಚಿಮ್ಮಿ ಗ್ರಾಮದ 80 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. 25 ಮೆಗಾವಾಟ್ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಹೊಸ ಜಲ ವಿದ್ಯುತ್ ಯೋಜನೆಗಳಿಗೆ ನಿಷೇಧ ಹೇರುವಂತೆ ಪರಿಸರವಾದಿಗಳು ಬೇಡಿಕೆಯಿಟ್ಟಿದ್ದಾರೆ.
ಲುಂಬಾಡುಗ್ ನದಿಯ ಮೇಲೆ ನಿರ್ಮಿಸಲಾದ ಈ ಯೋಜನೆಯು ಬಿಯಾಸ್ ಹಾಗೂ ಅದರ ಉಪನದಿಗಳ 40 ಯೋಜನೆಗಳಲ್ಲೊಂದಾಗಿದೆ. ಇದರ 19 ಯೋಜನೆಗಳು ಭೂಗತ ಹಾಗೂ ಗಮನಾರ್ಹವಾದ ಉತ್ಖನನದೊಂದಿಗೆ 25 ಮೆಗಾವಾಟ್ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿವೆ.
ಮೇಘಾ ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಕಾರ್ಯಗತಗೊಳ್ಳುತ್ತಿರುವ ಯೋಜನೆಯಲ್ಲಿ ಆರಂಭದಲ್ಲೇ ಸೋರಿಕೆ ಕಂಡುಬಂದಿದೆ. ಸೋರಿಕೆಯ ಪ್ರಮಾಣ ಸಣ್ಣ ಪ್ರಮಾಣದಲ್ಲಿದ್ದು, ಸುರಕ್ಷತಾ ಪರಿಶೀಲನೆಯ ನಂತರ ಕಾರ್ಯಾರಂಭ ಮಾಡಲಾಗುವುದು ಎಂದು ಕಂಪನಿಯು ಜನರಿಗೆ ಭರವಸೆ ನೀಡಿದೆ.
ಮೇ 10ರಂದು ನಡೆದ ಈ ಘಟನೆಯಿಂದಾಗಿ ಮುಲ್ತಾನ್ ಮಾರುಕಟ್ಟೆ ಮತ್ತು 4 ಹೆಕ್ಟೇರ್ ಕೃಷಿಭೂಮಿ ಮೇಲೆ ಪರಿಣಾಮ ಬೀರಿದ್ದು, ಈ ಪ್ರದೇಶದಲ್ಲಿ 6 ಅಡಿಗಳಷ್ಟು ಕೆಸರು ಆವರಿಸಿಕೊಂಡಿರುವುದನ್ನು ತಂಡ ಪತ್ತೆಹಚ್ಚಿದೆ. ಜಲಾಶಯ ಸಂಪೂರ್ಣವಾಗಿ ಬರಿದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ನೀರು ಸೋರಿಕೆ ಮುಂದುವರಿದಿದೆ ಎಂದು ತಂಡ ಹೇಳಿದೆ.