ಕೊಟ್ಟಾಯಂ: ಮನ್ನಾರ್ಕಾಡ್ ನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಪಕ್ಷಿಗಳನ್ನು ದಯಾಮರಣಗೊಳಿಸಿ ಹೂಳಲು ಕ್ರಮ ಕೈಗೊಳ್ಳಲಾಗಿದೆ.
ಕೋಳಿ, ಬಾತುಕೋಳಿ ಮತ್ತು ಕ್ವಿಲ್ ಮೊಟ್ಟೆ, ಮಾಂಸ ಮತ್ತು ಗೊಬ್ಬರ ಮಾರಾಟ ಮತ್ತು ಆಮದು ಮೇಲೆ ನಿಷೇಧ ಹೇರಲಾಗಿದೆ.
ಮನ್ನಾರ್ಕಾಡ್ ಪಂಚಾಯಿತಿಯ 12, 13 ಮತ್ತು 14ನೇ ವಾರ್ಡ್‍ಗಳಲ್ಲಿ ಹಾಗೂ ಪುತ್ತುಪಳ್ಳಿ ಪಂಚಾಯಿತಿಯ ಎರಡು ಮತ್ತು ಮೂರು ವಾರ್ಡ್‍ಗಳಲ್ಲಿ ನಿರ್ಬಂಧ ಹೇರಲಾಗಿದೆ. ಅಲ್ಲದೆ, 1 ಕಿ.ಮೀ.ನಿಂದ 10 ಕಿ.ಮೀ ವ್ಯಾಪ್ತಿಯನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ.
ಅಲ್ಲದೆ, ಪಶು ಕಲ್ಯಾಣ ಇಲಾಖೆ, ಸ್ಥಳೀಯಾಡಳಿತ, ಕಂದಾಯ, ಪೋಲೀಸ್, ಅರಣ್ಯ, ಆರೋಗ್ಯ, ಅಗ್ನಿಶಾಮಕ, ಮೋಟಾರು ವಾಹನ ಇಲಾಖೆಗಳ ಸಮನ್ವಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು.